ಬೆಂಗಳೂರು: ‘ನಂಗ್ಯಾಕೆ ಬೇಕಪ್ಪಾ ಎನ್ನುವ ಮನಸ್ಥಿತಿ ಬೇಡವೇ ಬೇಡ. 11 ಜನ ಆಡೋ ಕ್ರಿಕೆಟಲ್ಲಿ ಇಬ್ಬರು ಆಡ್ತಾರೆ, ಉಳಿದವ್ರು ಪೆವಿಲಿಯನ್ ಅಲ್ಲಿ ಕೂರ್ತಾರೆ. ಇದು ಕ್ರಿಕೆಟ್ ಅಲ್ಲ, ಫುಟ್ಬಾಲ್. ಎಲ್ಲರೂ ಆಡಬೇಕು, ಓಡಬೇಕು. ಬಾಲ್ ಬಂದಾಗ ಹೆಚ್ಚು ಸಮಯ ಇಟ್ಟುಕೊಳ್ಳುವಂತಿಲ್ಲ, ಗೋಲ್ ಮುಟ್ಟೋವರೆಗೂ ಪಾಸ್ ಇಟ್ ಆನ್. ನಮ್ಮ ಆಡಳಿತವೂ ಹಾಗೇ ಇರಬೇಕು...’
-ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖಾ ಮುಖ್ಯಸ್ಥ ಅಧಿಕಾರಿಗಳಿಗೆ ಮಾಡಿದ ಮೊದಲ ಪಾಠವಿದು. ಆಳೋದು ಬೇರೆ, ಆಡಳಿತ ಮಾಡೋದು ಬೇರೆ. ಕಲ್ಯಾಣ ಚಾಲುಕ್ಯರ ಶಿಲಾಶಾಸನದಲ್ಲಿ ಇದು ಹೇಳಿದೆ, ನಾನು ಹೇಳುತ್ತಿರೋದು ಅಲ್ಲ. ಆಳೋರು ಆಡಳಿತ ಮಾಡಲು ಹೋಗುತ್ತಿದ್ದಾರೆ. ಆಡಳಿತ ಮಾಡೋರು ಆಳಲು ಹೋಗುತ್ತಿದ್ದಾರೆ. ಈ ವ್ಯತ್ಯಾಸ ಅರಿತರೆ ಸಂಘರ್ಷ ನಿಯಂತ್ರಿಸಬಹುದು ಎಂದು ಮೆಲು ದನಿಯಲ್ಲಿ ತಿಳಿಹೇಳಿದರು. ಉಪದೇಶ ಕೊಡುವ ಭಾಷಣ ಮಾಡುತ್ತಿಲ್ಲ. ಇದೆಲ್ಲವೂ ಪ್ರಾಯೋಗಿಕವಾಗಿ ಸಾಧ್ಯ ಎಂಬ ಎಚ್ಚರ ಇದ್ದೇ ಹೇಳುತ್ತಿದ್ದೇನೆ. ಇಲಾಖೆಗಳ ಪರ್ಫಾರ್ವೆನ್ಸ್ ಮೌಲ್ಯಮಾಪನ ಆಗಲಿದೆ. ಹೊಣೆಗಾರಿಕೆ, ಪಾರದರ್ಶಕತೆ ಇರಬೇಕು. ಇಡೀ ರಾಜ್ಯದ ಜನರಿಗೆ ಒಂದು ಹೊಸ ಆಡಳಿತ ಕೊಡುತ್ತಿದ್ದೇವೆ ಎನ್ನುವ ಸಂದೇಶ ತಲುಪಬೇಕು ಎಂದು ಬೊಮ್ಮಾಯಿ ಕೋರಿದರು.
ನಮ್ಮನೇ ಬಜೆಟ್ನಲ್ಲಿ ಕಡಿತ ಮಾಡ್ತಿವಿ ತಾನೆ?
ಪ್ರತಿ ಇಲಾಖೆಯೂ ಶೇ.5ರಷ್ಟಾದ್ರೂ ಕಡಿಮೆ ಮಾಡಲು ಈಗಿನಿಂದಲೇ ಪ್ರಯತ್ನ ಮಾಡಿ ಎಂದು ನೂತನ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ವರ್ಷಾಂತ್ಯಕ್ಕೆ ಶೇ.5 ಅನಾವಶ್ಯಕ ವೆಚ್ಚ ಕಡಿತ ಮಾಡಿ, ಕೆಲವು ತೀರ್ವನವನ್ನು ಮುಂದೂಡಿ. ನಾನೇನು ಭಾರಿ ದೊಡ್ಡ ಟಾಸ್ಕ್ ಕೊಡುತ್ತಿಲ್ಲ ನಿಮಗೆ ಎಂದು ತಿಳಿಹೇಳಿದರು. ನಮ್ಮನೆ ಬಜೆಟ್ನಲ್ಲಿ ಕಡಿಮೆ ಮಾಡಿತ್ತೀವಿ ಅಲ್ಲವೇ? ಶಾಪಿಂಗ್ ಕಡಿಮೆ ಮಾಡಿದರೆ ಆಗುತ್ತದೆ ಅಲ್ಲವೇ. ಇಲ್ಲೂ ಹಾಗೆ ಎಚ್ಚರಿಕೆ ವಹಿಸಿ ಎಂದರು.
ಒಂಬತ್ತು ಅಂಶದ ಪಾಠ
2. ಪ್ರಗತಿಪರ ಆಡಳಿತ ನೀಡುವ ಸಾಮರ್ಥ್ಯ, ಹೆಸರು ಗಳಿಸಿರುವ ಅಧಿಕಾರಿವರ್ಗ ಇದೆ. ಇನ್ನಷ್ಟು ದಕ್ಷತೆಯ ಕೆಲಸ ಮಾಡಬೇಕಿದೆ.
3. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಒಮ್ಮೆ ಭ್ರಷ್ಟಾಚಾರ ಪ್ರವೇಶವಾದರೆ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಮುಟ್ಟಲ್ಲ. ವಿಳಂಬ ಎಂಬುದು ಆಡಳಿತದಲ್ಲಿ ಕ್ಯಾನ್ಸರ್ ಇದ್ದಂತೆ!
4. ಪ್ರತಿ ನಿಮಿಷ ಮುಖ್ಯ. ನಿರ್ಣಯ ತೆಗೆದುಕೊಂಡಿದ್ದು ಕಾಲಮಿತಿಯಲ್ಲಿ ಅನುಷ್ಠಾನ ಆಗಬೇಕು. ಕಾರ್ಯಕ್ರಮದ ಬಗ್ಗೆ ಸ್ಪಷ್ಟತೆ ಇರಬೇಕು. ಯಾವ ಕಾನೂನಿನಡಿ ಬರತ್ತೆ ನೋಡಿ.
5. ಕೇವಲ ಮ್ಯಾಕ್ರೋ ಮ್ಯಾನೇಜ್ವೆುಂಟ್ ಅಲ್ಲ ಮೈಕ್ರೋ ಮ್ಯಾನೇಜ್ವೆುಂಟ್ಗೂ ಆಸಕ್ತಿ ವಹಿಸಿ ಕೆಲಸ ಮಾಡಿ. ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ. ಅನಾವಶ್ಯಕ ವೆಚ್ಚ ಕಡಿಮೆ ಆಗಬೇಕು.
6. ಉತ್ತಮ ಆಡಳಿತ ನೀಡಲು ಪ್ರತಿದಿನ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು, ತಳಹಂತದವರೆಗೆ ಒಯ್ಯುಬೇಕು. ಕಾಗದದ ಮೇಲಿರುವುದಲ್ಲ, ಭೌತಿಕವಾಗಿ ಕೆಲಸ ಆಗಿರಬೇಕು.
7. ಯಶಸ್ಸು ಹಾಗೂ ವೈಫಲ್ಯದ ಹೊಣೆ ಇಬ್ಬರೂ ಹೊರೋಣ. ಸಿಎಂ ಆಗಿ ನಾನೂ ನಿಮ್ಮೆಲ್ಲರ ತಂಡದ ಸದಸ್ಯನೇ.
8. ಜನರೂ ಶ್ರೀಮಂತರಿರಬೇಕು, ಸರ್ಕಾರವೂ ಶ್ರೀಮಂತ ಇರಬೇಕು ಮತ್ತು ಜನರ ಸುತ್ತ ಆಡಳಿತ ಇರಬೇಕೇ ಹೊರತು ಆಡಳಿತದ ಸುತ್ತ ಜನ ಸುತ್ತಬಾರದು ಎಂಬ ಸ್ಪಷ್ಟತೆ ನನಗಿದೆ.
9. ಹಳೆಯ ಜಾಗ, ಹಳೆಯ ಮೆಥೆಡ್, ಗೆಟ್ ಅವೇ ಸ್ಟಾಪ್ ಆಗ್ಬೇಕು. ಸಹಿಸಲ್ಲ. ಸೂಕ್ಷ್ಮತೆ, ಸಂವೇದನೆ ಇಟ್ಟುಕೊಳ್ಳಿ. ಜನ ನಮ್ಮನ್ನು ನೋಡುತ್ತಿದ್ದಾರೆ. ಬಹಳ ಆಸೆ, ಭರವಸೆ ಇಟ್ಟಿದ್ದಾರೆ.