ಜಿಲ್ಲೆ

ಉತ್ತಮ ನಾಗರಿಕರನ್ನು ರೂಪಿಸಲಿ

ರಾಘವೇಂದ್ರಗೌಡ ಭೀ ಪಾಟೀಲ್

ಘಟಪ್ರಭಾ: ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸುವ ಮಹತ್ವದ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಕೆಎಚ್‌ಐ ಆಸ್ಪತ್ರೆಯ ಡಾ.ಅನುಜಾ ವೈದ್ಯ ಹೇಳಿದರು.

ಡಾ.ಜಾಕೀರ್ ಹುಸೇನ್ ಶಿಕ್ಷಣ ಸಂಸ್ಥೆಯ ಮದನಿ ಮಿಯಾನ್ ಉರ್ದು ಪ್ರೌಢಶಾಲೆ, ಎಚ್‌ಕೆಜಿಎನ್ ಉರ್ದು ನರ್ಸರಿ ಮತ್ತು ಶ್ರೀಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಹಸೀನಾ ಕಬ್ಬೂರ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ದಳವಾಯಿ, ಹಸನ ಮುಲ್ಲಾ, ಕಬೀರ್ ಕಬ್ಬೂರ, ಎನ್.ಎನ್.ಬಾಗೆ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.