ಜಿಲ್ಲೆ

ಹೀಗೆ ಮುಂದುವರಿಯಲಿ ಗಣೇಶೋತ್ಸವ ಪರಂಪರೆ

ಶಿರಸಿ: ಸರ್ವ ದೇವರಿಗೂ ಪ್ರಥಮ ಪೂಜಿತ ಗಣೇಶ. ಸಾರ್ವಜನಿಕ ಗಣೇಶೋತ್ಸವವನ್ನು ಜಾತಿ, ಧರ್ಮ, ಮತ, ಪಂಥ ಬೇಧ ಮರೆತು ನಾವೆಲ್ಲರೂ ಶ್ರದ್ಧಾ-ಭಕ್ತಿ, ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಈ ಪರಂಪರೆ ಹೀಗೇಯೇ ಮುಂದುವರಿಯಬೇಕು ಎಂದು ನಗರದ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ನುಡಿದರು.

ಇಲ್ಲಿಯ ಗಣೇಶನಗರದಲ್ಲಿ ನೂತನವಾಗಿ ನಿರ್ವಿುಸಲಾದ ಭವ್ಯ ಗಣೇಶ ಮಂಟಪವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು. ಗಣೇಶನಗರ ಸೃಷ್ಟಿಯಾಗಿ 40 ವರ್ಷ ಕಳೆದಿದ್ದು, ಆಗಿನಿಂದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಗಣೇಶ ಚತುರ್ಥಿ ಆಚರಿಸುತ್ತಿರುವುದು ವೈಶಿಷ್ಟ್ಯದಿಂದ ಕೂಡಿದೆ. ನೂತನವಾಗಿ ಲೋಕಾರ್ಪಣೆಯಾದ ಗಣೇಶ ಮಂಟಪದಲ್ಲಿ ಸಾಮೂಹಿಕ ಉಚಿತ ಮದುವೆ ನಡೆದರೆ ಈ ಭಾಗದ ಬಡ ಜನರಿಗೆ ಬಹಳ ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಆಡಳಿತ ಮಂಡಳಿ ಯೋಚಿಸುವುದು ಒಳಿತು ಎಂದ ಶ್ರೀಗಳು ಸಲಹೆ ನೀಡಿದರು.

ಸಿದ್ಧಿವಿನಾಯಕ ಕಲಾ ವೇದಿಕೆಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಕಟ್ಟಡ ನಿರ್ವಣಕ್ಕೆ ಸಹಕರಿಸಿದ ಇಂಜಿನಿಯರ್ ಅರುಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಾಲಿಂಗಣ್ಣನವರ್, ಜಿಪಂ ಮಾಜಿ ಸದಸ್ಯರಾದ ಜಿ.ಎನ್. ಹೆಗಡೆ, ಶೋಭಾ ನಾಯ್ಕ, ಪ್ರಮುಖರಾದ ಎಸ್.ಬಿ. ಹಿರೇಮಠ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಸಂಘಟನೆಯ ಪ್ರಮುಖರಾದ ನಾಗರಾಜ ಶೆಟ್ಟಿ, ಸುರೇಶ ಶೆಟ್ಟಿ, ರಾಜು ಶೆಟ್ಟಿ, ಪ್ರಮುಖರಾದ ಮಾಲತಿ ಶೆಟ್ಟಿ, ಅರುಣ ಶೆಟ್ಟಿ, ಹೇಮಲತಾ ಮಡಿವಾಳ, ರಾಜು ಮುಕ್ರಿ, ಕೃಷ್ಣ ಶೆಟ್ಟಿ, ಕೃಷ್ಣ ಗಾಂವಕರ, ಇತರರಿದ್ದರು.

ಗಣೇಶ ನಿರ್ದಿಷ್ಟ ಜಾತಿ, ಧರ್ಮಕ್ಕೆ ಸೇರಿದ ದೇವರಲ್ಲ. ಮುಸ್ಲಿಂ ಸಮಾಜದವರು ಗಣಪತಿಯನ್ನು ಪ್ರತಿಷ್ಠಾಪಿಸಿ, ಭ್ರಾತೃತ್ವ ಮೆರೆದು, ಹಿಂದುಗಳ ಜತೆ ಸಂಭ್ರಮದಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. | ಶ್ರೀ ಶಿವಲಿಂಗ ಮಹಾಸ್ವಾಮೀಜಿ ಬಣ್ಣದಮಠ