ಜಿಲ್ಲೆ

ಬಿಜೆಪಿ, ಮಿತ್ರ ಪಕ್ಷಗಳಿಗೆ ರೈತರು ತಕ್ಕ ಪಾಠ ಕಲಿಸಲಿ

ಮದ್ದೂರು: ರೈತ ವಿರೋ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದ ಹಾಗೂ ರೈತ ಮುಕ್ತ ಭಾರತ ಮಾಡಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕೆಂದು ಮಂಡ್ಯ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ಕುಮಾರ್ ತಿಳಿಸಿದ್ದಾರೆ.

2024ರ ಸಂಸತ್ ಚುನಾವಣೆಯಲ್ಲಿ ಮತ ಚಲಾಯಿಸುವ ಮುನ್ನ ದೆಹಲಿ ಗಡಿಯಲ್ಲಿ ಚಳಿ, ಮಳೆ ಎನ್ನದೆ ಒಂದೂವರೆ ವರ್ಷ ಐತಿಹಾಸಿಕ ಚಳವಳಿ ಮಾಡಿದ ಅವಯಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡಿದ್ದರು, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿಗೆ ಮತ ನೀಡಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿರೋಧದ ನಡುವೆಯೂ ಕರಾಳ ಕೃಷಿ ಕಾಯ್ದೆಗೆ ಜಾರಿಗೆ ಮುಂದಾದ, ದೆಹಲಿ ಗಡಿಯಲ್ಲಿ ನಿರಂತರ ಚಳವಳಿ ಮಾಡುತ್ತಿದ್ದ ರೈತರನ್ನ ನಿರ್ಲಕ್ಷ ಮಾಡಿದ್ದ, ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡದ, ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡದ ನರೇಂದ್ರ ಮೋದಿ ಹಾಗೂ ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರು ಬಿಸಿ ಮುಟ್ಟಿಸಬೇಕು ಎಂದರು.

10 ವರ್ಷದಿಂದ ಕಬ್ಬಿನ ಬೆಲೆ ಹೆಚ್ಚಿಸಿರುವುದು ಟನ್ನೊಂದಕ್ಕೆ ಕೇವಲ 72 ರೂ. ಮಾತ್ರ. ಅದು ಶೇ.9.5 ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿಯ ಆಗುತ್ತಿದ್ದು ಈಗ ಶೇ.10.25 ರಷ್ಟು ಇಳುವರಿ ಮಾಡಿಸಿ ಕಬ್ಬಿನ ದರ ನಿಗದಿ ಮಾಡಲು ಆದೇಶಿಸಿ ಕಬ್ಬು ಬೆಳೆಗಾರರನ್ನು ನಷ್ಟಕ್ಕೆ ಸಿಲುಕಿಸಿದೆ. ಕಬ್ಬಿಗೆ ಹಾಗೂ ಯಾವುದೇ ಬೆಳೆಗಳಿಗೆ ವೈಜ್ಞಾನಿಕವಾಗಿ ಮತ್ತು ಲಾಭದಾಯಕ ಬೆಲೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ವಿರೋ ನರೇಂದ್ರ ಮೋದಿ ಸರ್ಕಾರವನ್ನು ಮನೆಗೆ ಕಳುಹಿಸದಿದ್ದಲ್ಲಿ ರೈತರಿಗೆ ಉಳಿಗಾಲವಿಲ್ಲ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ರೈತರ ಉಳಿವಿಗೆ ಸಹಕರಿಸಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಕರಾಳ ದಿನಗಳನ್ನು ಎದುರು ನೋಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.