ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸ್ವಾತಂತ್ರೊೃೀತ್ಸವ ನಿಮಿತ್ತ ಕಾರ್ಖಾನೆ ಹಿರಿಯ ನಿರ್ದೇಶಕ ಶಿವಪುತ್ರ ಶಿರಕೋಳಿ ಧ್ವಜಾರೋಹಣ ನೆರವೇರಿಸಿದರು.
ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕಳೆದ ವರ್ಷ ಕಾರ್ಖಾನೆ 8,03,459 ಮೆ.ಟನ್ ಕಬ್ಬು ನುರಿಸಿ 7,03,700 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿ, 10.90 ಸರಾಸರಿ ಇಳುವರಿ ಪಡೆದು ಹಂಗಾಮು ಯಶಸ್ವಿಗೊಳಿಸಿದೆ. ಈ ವರ್ಷ ಸುಮಾರು 10-12 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ರೈತರು ತಮ್ಮ ಕಬ್ಬನ್ನು ಹಿರಣ್ಯಕೇಶಿ ಕಾರ್ಖಾನೆಗೆ ಪೂರೈಸಬೇಕು ಎಂದು ವಿನಂತಿಸಿದರು. ನಿ
ರ್ದೇಶಕರಾದ ಶಿವಪುತ್ರ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಬಸವರಾಜ ಕಲ್ಲಟ್ಟಿ, ಪ್ರಭುದೇವ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಮ್ಯಾನೇಜರ್ ಎ.ಆರ್.ಚಾಟೆ, ಅಧಿಕಾರಿಗಳಾದ ಎಂ.ಆರ್.ಪಾಟೀಲ, ಎಸ್.ಸಿ.ನಾಗನ್ನವರ, ವಿ.ಎಸ್.ಕತ್ತಿ, ಕೆ.ಆರ್.ಬೆಟಗೇರಿ, ಪ್ರಕಾಶ ಮುಗಳಿ ಇತರರಿದ್ದರು.