ಚಿಮ್ಮಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತೆರಬಂಡಿ ಸ್ಫರ್ಧೆ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು. ಶ್ರೀ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು, ಮಲ್ಲಪ್ಪ ಮುಗಳಖೋಡ, ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ ಇತರರಿದ್ದರು 
ಜಿಲ್ಲೆ

ರೈತರು ಎತ್ತು, ಗೋವು ಸಾಕಲು ಮುಂದಾಗಲಿ

ಚಿಮ್ಮಡ: ಆಧನಿಕತೆಯ ಭರಾಟೆಯಲ್ಲಿ ರೈತರಲ್ಲಿ ಜಾನುವಾರು ಸಾಕುವ ಪ್ರವೃತ್ತಿ ಮಾಯವಾಗುತ್ತಿದ್ದು, ಗೋವು ಎತ್ತು ದೇವರು. ಅವು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಸಹಕಾರಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಮಹೋತ್ಸವ ನಿಮಿತ್ತ ಜೈ ಆಂಜನೇಯ ಕುಸ್ತಿ ಕ್ರೀಡಾ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಪೋಷಕಾಂಶಗಳುಳ್ಳ ಆಹಾರ ತಿನ್ನಿಸಿ ಸದೃಢ ಮಾಡುತ್ತಿದ್ದರು. ಆದರೆ, ಇಂದಿನ ಪೀಳಿಗೆ ಹೈಬ್ರಿಡ್ ಆಹಾರ ಸೇವಿಸುವುದರಿಂದ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದರು.

ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ರಘುನಾಥಪ್ರಿಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಮಲ್ಲಪ್ಪ ಮುಗಳಖೋಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಜಿಪಂ ಮಾಜಿ ಸದಸ್ಯ ಪುಂಡಲೀಕಪ್ಪ ಪಾಲಭಾವಿ, ಎಪಿಎಂಸಿ ನಿರ್ದೇಶಕ ಪ್ರಭು ಮುಧೋಳ, ಸುರೇಶ ಅಕ್ಕಿವಾಟ, ಪಿಕೆಪಿಎಸ್ ಮಾಜಿ ನಿರ್ದೇಶಕ ಮಲ್ಲಪ್ಪ ದೊಮನಿ, ಅಡಿವೆಪ್ಪ ಪಾಟೀಲ ಮತ್ತಿತರರಿದ್ದರು.
ಜೈ ಆಂಜನೇಯ ಕುಸ್ತಿ ಕ್ರೀಡಾ ಸಂಘದ ಅಧ್ಯಕ್ಷ ಕಲ್ಲನಗೌಡ ಪಾಟೀಲ ಸ್ವಾಗತಿಸಿದರು. ಭೀಮಶಿ ಅರುಟಗಿ ನಿರೂಪಿಸಿದರು. ಪ್ರಕಾಶ ಬಳಗಾರ ವಂದಿಸಿದರು.

ವಿಜೇತ ತಂಡಗಳು
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ 30 ಸಾವಿರ ರೂಗಳನ್ನು ಯಾದವಾಡದ ರೇವಣಸಿದ್ಧೇಶ್ವರ ತಂಡ ಪಡೆದುಕೊಂಡಿತು. ಶಿರೋಳದ ಜಕಿರಣಗೌಡ ನಾಗರಡ್ಡಿ 2, ಇಟ್ನಾಳದ ದುರ್ಗಾದೇವಿ ತಂಡ 3, ಮೆಟಗುಡ್ದ ಮಾಯದಜಾಡಿ 4, ಮಾಚಕನೂರದ ಹೊಳೆ ಬಸವೇಶ್ವರ ತಂಡ 5, ಮುಧೋಳದ ರೇಣುಕಾದೇವಿ ತಂಡ 6, ಚಿಮ್ಮಡದ ಮಲ್ಲಿಕಾರ್ಜುನ ತಂಡ 7, ಜಮಖಂಡಿಯ ಜೈ ಹನುಮಾನ ತಂಡ 8, ಕುಳಲಿಯ ಕೋರೆಮ್ಮದೇವಿ ತಂಡ 9, ಬಬಲಾದಿಯ ಸಿದ್ಧರಾಮೇಶ್ವರ ತಂಡ 10 ಹಾಗೂ ಸಂಕ್ರಟ್ಟಿಯ ಮಲ್ಲಿಕಾರ್ಜುನ ತಂಡ 11ನೇ ಬಹುಮಾನ ಪಡೆದುಕೊಂಡಿತು.