ಜಿಲ್ಲೆ

ಸಂಜೀವಿನ ಒಕ್ಕೂಟದ ಸೌಲಭ್ಯ ಸದುಪಯೋಗವಾಗಲಿ

ಎನ್.ಆರ್.ಪುರ: ಕಾನೂರು ಗ್ರಾಮ ಪಂಚಾಯಿತಿ ಮಟ್ಟದ ಅರ್ಹ ಮಹಿಳೆಯರು ಕಾನೂರು ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಎನ್‌ಆರ್‌ಎಲ್‌ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೇಳಿದರು.

ಕಾನೂರು ಗ್ರಾಪಂನಲ್ಲಿ ಆಯೊಜಿಸಿದ್ದ ಕಾನೂರು ಸಂಜೀವಿನಿ ಗ್ರಾಪಂ ಮಟ್ಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಒಕ್ಕೂಟ ಅನೇಕ ಗುರಿಗಳನ್ನು ಹೊಂದಿದೆ. ಸಂಜೀವಿನಿ ಒಕ್ಕೂಟದಿಂದ ಸಿಗುವ ಸಾಲ, ಅನುದಾನ ಹಾಗೂ ಇತರ ಸೌಲಭ್ಯಗಳನ್ನು ಸ್ವ ಸಹಾಯ ಸಂಘದ ಸದಸ್ಯರು ಉಪಯೋಗಿಸಿಕೊಳ್ಳ ಬೇಕು. ಪ್ರತಿ ವರ್ಷ ಆಂತರಿಕ ಮತ್ತು ಶಾಸನ ಬದ್ದ ಲೆಕ್ಕ ಪರಿಶೋಧನೆ ಮಾಡಿಸಬೇಕು. ವಾರ್ಷಿಕ ಮಹಾಸಭೆ ಏರ್ಪಡಿಸಿ ಒಕ್ಕೂಟದ ಆದಾಯ ಹಾಗೂ ವೆಚ್ಚಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಪಡೆದುಕೊಳ್ಳಬೇಕು. ಸಂಘದ ಸದಸ್ಯರು ಗ್ರಾಮಸಭೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶೀಬಾ, ಕಾನೂರು ಗ್ರಾಪಂ ಅಧ್ಯಕ್ಷ ವಿಜಯಕುಮಾರ್, ಸದಸ್ಯ ರತ್ನಾಕರ್, ಕಾರ್ಯದರ್ಶಿ ಹೂವಮ್ಮ, ಸಂಜೀವಿನಿ ಒಕ್ಕೂಟದ ಖಜಾಂಚಿ ಶ್ವೇತಾ, ಉಪಾಧ್ಯಕ್ಷೆ ಅಶ್ವಿನಿ, ವಲಯ ಮೇಲ್ವಿಚಾರಕ ಗಿರೀಶ್, ಲತಾ, ಶೈನಿ, ವಿನೂತ, ಕವನ, ಕೀರ್ತಿ, ಅಮೃತ, ಸಂಧ್ಯಾ, ಎಚ್.ಆರ್.ಅಮೃತ ಇದ್ದರು.