ಚಿಕ್ಕಮಗಳೂರು: ಕನ್ನಡದ ಸಾರ, ಸತ್ವ ಜಗತ್ತಿನೆಲ್ಲೆಡೆ ಪಸರಿಸಬೇಕು. ಆ ಮೂಲಕ ಕನ್ನಡ ನಾಡಿನ ಹಿರಿಮೆ, ಗರಿಮೆ ಸರ್ವರಿಗೂ ತಿಳಿಯಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ತಿಳಿಸಿದರು.
ವಿದೇಶ ಪ್ರಯಾಣ ಕೈಗೊಂಡಿರುವ ಚಟ್ನಳ್ಳಿ ಮಹೇಶ್ ಅವರಿಗೆ ಸುವರ್ಣ ಮಾಧ್ಯಮ ಭವನದಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಒಳಗಿನ ಬೇಗುದಿಯನ್ನು ಹಂಚಿಕೊAಡರೆ ಸಾಹಿತಿಗಳಿಗೂ ಸಂತಸ. ಹಂಚುವುದೇ ಸಂಸ್ಕೃತಿಯ ನೀತಿಯಾಗಬೇಕು. ಅನುಭವ ಹಂಚಿಕೊಳ್ಳುವುದು ಸಾಹಿತಿ, ಕಲಾವಿದರ ಮನೋಧರ್ಮವಾಗಬೇಕು ಎಂದರು.
ಕನ್ನಡದ ಸಾಹಿತ್ಯ-ಸಂಸ್ಕೃತಿ-ಕಲೆ-ಸAಗೀತ ಜಗತ್ತಿನಾದ್ಯಂತ ಪಸರಿಸಬೇಕು. ಅದನ್ನು ಬಿಟ್ಟು ನನ್ನೊಳಗೆ ಬಚ್ಚಿಟ್ಟುಕೊಳ್ಳಬೇಕು ಎಂಬ ಸಣ್ಣತನ ಸಲ್ಲದು. ಕಲಿತ-ಕೇಳಿದ-ಓದಿದ-ತಿಳಿದ ಸಂಗತಿಗಳನ್ನು ಉಪನ್ಯಾಸ-ಸಂವಾದದ ಮೂಲಕ ಅನಿವಾಸಿ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಇದೊಂದು ಸುಸಂದರ್ಭ ಎಂದು ಹೇಳಿದರು.
ವಿದೇಶದಲ್ಲಿರುವ ಕನ್ನಡಿಗರಿಗೆ ಕನ್ನಡಾಭಿಮಾನ ನಮಗಿಂತ ಹೆಚ್ಚಿದೆ. ಅಮೇರಿಕ, ಕೆನಡಾ ಸೇರಿದಂತೆ ಜಗತ್ತಿನ ಸುಮಾರು ೧೦೦ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಸಂಘಗಳು ಕ್ರಿಯಾಶೀಲವಾಗಿವೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತು ಸತ್ಯವಾಗಿದೆ. ಬಹಳ ಹಿಂದೆಯೆ ರಸಋಷಿ ಕುವೆಂಪು ಅವರು ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀ ಕುಡಿಯುವ ನೀರು ಕಾವೇರಿ ಎನ್ನುವ ಮೂಲಕ ಕನ್ನಡದ ವ್ಯಾಪ್ತಿ ಹಿಗ್ಗಿಸಿದ್ದಾರೆ ಎಂದು ಸ್ಮರಿಸಿದರು.
ಕನ್ನಡದ ಹಾಡು, ವಚನ, ಜನಪದ, ಸಾಹಿತ್ಯ, ಸಂಸ್ಕೃತಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಆವರಿಸುತ್ತದೆ. ಅಕ್ಕ ಸಮ್ಮೇಳನ ಸೇರಿದಂತೆ ದೊಡ್ಡ ಕಾರ್ಯಕ್ರಮಗಳಲ್ಲಿ ಕೇಳಿದ ಮೆಲುಕು ವರ್ಷಗಟ್ಟಲೇ ಅವರಲ್ಲಿ ಉಳಿದಿರುತ್ತದೆ. ಈಗಿನ ತಲೆಮಾರಿನ ಕನ್ನಡದ ಆಸಕ್ತಿ ಹೊಸಪೀಳಿಗೆಯಲ್ಲಿ ಕಡಿಮೆ. ಕನ್ನಡದ ಹಾಡು, ನಾಟಕ, ವಚನ ಅಲ್ಲಿಯ ಭಾಷೆಯ ಲಿಪಿಯಲ್ಲಿ ಬರೆದುಕೊಂಡು ಮಕ್ಕಳು ಹೇಳುತ್ತಾರಾದರೂ ಅದರ ಅರ್ಥ ಒಳಾರ್ಥಗಳ ಅರಿವು ಅವರಿಗಿರುವುದಿಲ್ಲ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತಿç, ಪ್ರತಿಷ್ಠಾನದ ಸಂಚಾಲಕರಾದ ದೀಪಕ್ ದೊಡ್ಡಯ್ಯ, ರುದ್ರೇಶ ಕಡೂರು, ಕಾರ್ಯದರ್ಶಿ ಸುಮಿತ್ರಾ ಶಾಸ್ತಿç, ಪ್ರಮುಖರಾದ ಸುಮಂತ ನೆಮ್ಮಾರ್, ತೇಜಸ್ವಿನಿ ಮಹೇಶ್, ಮಂಜುನಾಥ್ ಮತ್ತಿತರರಿದ್ದರು.