ತುಮಕೂರಿನ ದಾಬಸ್‌ಪೇಟ ಕೈಗಾರಿಕೆ ವಲಯದಲ್ಲಿ ಇಂಟ್ರಾಕ್ಟಿವ್ ಬೋರ್ಡ್ ಉತ್ಪಾದನಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ರೇವಣಸಿದ್ಧ ಶಿವಾಚಾರ್ಯರು, ಗಣೇಶ ಹುಕ್ಕೇರಿ, ಮಹೇಶ ಬೆಲ್ಲದ, ಶಿವಾನಂದ ಮಹಾಶೆಟ್ಟಿ, ಪ್ರಕಾಶ ಬೆಲ್ಲದ, ಸುರೇಶ ಬೆಲ್ಲದ, ರಮೇಶ ಬೆಲ್ಲದ ಇದ್ದರು. 
ಜಿಲ್ಲೆ

ಉತ್ತರ ಕರ್ನಾಟಕದ ಉದ್ಯಮಿಗಳು ಬೆಳೆಯಲಿ

ಕಬ್ಬೂರ: ದೇಶದ ಉದ್ಯಮಿಗಳು ಜಾಗತಿಕವಾಗಿ ಸ್ಪರ್ಧೆ ನೀಡುತ್ತಾರೆ ಎನ್ನುವುದಕ್ಕೆ ಮಹೇಶ ಬೆಲ್ಲದ ಹಾಗೂ ಶಿವಾನಂದ ಮಹಾಶೆಟ್ಟಿ ನಿದರ್ಶನ ಎಂದು ನಿಡಸೋಸಿ ದುರದುಂಡೀಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತುಮಕೂರಿನ ದಾಬಸ್‌ಪೇಟ ಕೈಗಾರಿಕೆ ವಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆನ್‌ಲೈನ್ ಇನ್‌ಸ್ಟ್ರುಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನೂತನ ಇಂಟ್ರಾಕ್ಟಿವ್ ಬೋರ್ಡ್ ಉತ್ಪಾದನಾ ಘಟಕ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉತ್ತರ ಕರ್ನಾಟಕದ ಉದ್ಯಮಿಗಳು ಬೆಳೆಯಲಿ ಎಂದರು.

ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಇಂಟ್ರಾಕ್ಟಿವ್ ಬೋರ್ಡ್ ಘಟಕ ತಯಾರಿಕೆ ಘಟಕ ನಮ್ಮಲೇ ಆರಂಭವಾಗುತ್ತಿರುವುದು ಎಲ್ಲ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ ಎಂದರು. ರಾಯಬಾಗ ಶಾಸಕ ಡಿ.ಎಂ.ಐಹೊಳೆ ಮಾತನಾಡಿದರು.

ಬಾಗೇವಾಡಿ ವಿರಕ್ತಮಠದ ಶಿವಾನಂದ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಕಬ್ಬೂರಿನ ಗೌರಿಶಂಕರಮಠದ ರೇವಣಸಿದ್ಧ ಶಿವಾಚಾರ್ಯರು, ಶಾಸಕ ಗಣೇಶ ಹುಕ್ಕೇರಿ, ಉದ್ಯಮಿ ಮಹೇಶ ಬೆಲ್ಲದ ಹಾಗೂ ಶಿವಾನಂದ ಮಹಾಶೆಟ್ಟಿ, ಪ್ರಕಾಶ ಬೆಲ್ಲದ, ಸುರೇಶ ಬೆಲ್ಲದ, ರಮೇಶ ಬೆಲ್ಲದ ಇತರರಿದ್ದರು. ಜಿ.ಬಿ.ಸಂಗಟೆ ನಿರೂಪಿಸಿದರು. ಎಸ್.ಕೆ. ಕಾಮಗೌಡ ವಂದಿಸಿದರು.