ಚಿಕ್ಕೋಡಿ: ಕವಿಗಳು ಅಧ್ಯಯನಶೀಲರಾದಾಗ ಮಾತ್ರ ಕನ್ನಡ ಭಾಷೆೆ ಪ್ರಬಲವಾಗಿ ಬೆಳೆಯುತ್ತದೆ ಎಂದು ಡಾ.ದಯಾನಂದ ನೂಲಿ ಹೇಳಿದರು. ಪಟ್ಟಣದ ಡಯಟ್ ಸಭಾಭವನದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚುಟುಕುಗಳು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಇರಬೇಕು ಎಂದರು.
ಡಾ.ಸುರೇಶ ಉಕ್ಕಲಿ ಮಾತನಾಡಿ, ಚುಟುಕುಗಳು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಹಾಗಿರಬೇಕು. ಮಾನವನ ನಡೆ-ನುಡಿ, ಆಚಾರ-ವಿಚಾರಗಳು ಬದಲಾಗುವಂತಿರಲಿ, ಚುಟುಕುಗಳು ಸುನಾಮಿ, ಕರೋನಾ, ಭೂಕಂಪ, ನೆರೆ ಹಾವಳಿ, ಹನಿಟ್ರ್ಯಾಪ್ ವಿಷಯಗಳ ಮೇಲೆ ಇರಬೇಕು ಎಂದು ತಿಳಿಸಿದರು. ಚುಸಾಪ ಅಧ್ಯಕ್ಷ ಚಂದ್ರಶೇಖರ ಅರಭಾಂವಿ, ಡಯಟ್ ಪ್ರಾಚಾರ್ಯ ಸಂಜಯ ಯಾದಗುಡೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಚ್.ಡಿ.ದರ್ಗಾದ, ಶಿವರಾಜ ಅರಳಿ, ಶಿವಲೀಲಾ ಹಿಪ್ಪರಗಿ, ಎಂ.ಟಿ.ಉಪಾಧ್ಯೆ, ಪುಷ್ಪಾ ಕುಂಬಾರ, ಜೆ.ಆರ್.ದಿನಕರ, ಶಿವಾನಂದ ಭಾಗಾಯಿ, ರಾಜು ಮಾನೆ, ಪದ್ಮಶ್ರೀ, ರೋಹಿಣಿ ಮಿರಜೆ, ಸವಿತಾ ದೋತರ, ಗೋವಿಂದಪ್ಪ, ಲಲಿತಾ ಹಿರೇಮಠ, ಉಮೇಶ ತೋಟದ, ಉದಯ ಹರಗಾಪುರೆ, ಬಿ.ಡಿ.ರಾಜಗುಳೆ ಇತರರಿದ್ದರು.