ನರಗುಂದ: ಅಂಗವಿಕಲರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ವಿವಿಧ ಯೋಜನೆ ಜಾರಿಗೊಳಿಸಲಾಗಿದೆ. ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಂಡು ಸಾಮಾನ್ಯರಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಅಂಗವಿಕಲರಿಗೆ 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ 2.0 ನಗರೋತ್ಥಾನ ಯೋಜನೆ ಹಂತ-14ರ 20.25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಜೂರಾದ 20 ತ್ರೈಸಿಕಲ್ ಬೈಕ್ಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
ಪುರಸಭೆ ಸಮುದಾಯ ವ್ಯವಹಾರಗಳ ಅಧಿಕಾರಿ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ಮುಖ್ಯಮಂತ್ರಿಗಳ ಯೋಜನೆಯಡಿ 2021-22ನೇ ಸಾಲಿನ ಅಮೃತ್ 2.0 ನಗರೋತ್ಥಾನ ಯೋಜನೆಯಲ್ಲಿ 20 ತ್ರಿಚಕ್ರ ವಾಹನಗಳ ವಿತರಣೆಗೆ 49 ಫಲಾನುಭವಿಗಳು ಅರ್ಜಿ ಹಾಕಿದ್ದರು. ನಿಗದಿತ ಅರ್ಜಿಗಳನ್ನು ಪರಿಶೀಲಿಸಿ 21.25 ಲಕ್ಷ ರೂ. ವೆಚ್ಚದಲ್ಲಿ ಲಭ್ಯವಾಗಿರುವ 20 ತ್ರಿಚಕ್ರ ವಾಹನಗಳನ್ನು ಅರ್ಹರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಎಸ್.ಆರ್. ಪಾಟೀಲ, ಚಂಬಣ್ಣ ವಾಳದ, ಪ್ರಕಾಶ ಹಾದಿಮನಿ, ಭಾವನಾ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಮಾರುತಿ ಅರ್ಭಣದ, ಸುನೀಲ ಕುಷ್ಟಗಿ, ಜೆ.ಎಂ.ಪಾಟೀಲ, ರಾಜೇಶ್ವರಿ ಹವಾಲ್ದಾರ, ಹನುಮಂತ ಹವಾಲ್ದಾರ, ಸಿದ್ದೇಶ ಹೂಗಾರ, ವಿಠಲ ಹವಾಲ್ದಾರ, ಹಸನಸಾಬ್ ತಹಸೀಲ್ದಾರ್, ಸಿದ್ದಪ್ಪ ಯಲಿಗಾರ, ಬಸವರಾಜ ಮಳಗಿ, ಚಂದ್ರಗೌಡ ಪಾಟೀಲ, ರಾಚನಗೌಡ ಪಾಟೀಲ, ರಿಯಾಜ್ ಕೊಣ್ಣೂರ, ಬೀರಪ್ಪ ಬಿದರಗಡ್ಡಿ, ಇತರರು ಉಪಸ್ಥಿತರಿದ್ದರು.