ಹುಕ್ಕೇರಿ: ಅಂಗವಿಕಲರು ಸರ್ಕಾರದ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಿ ಬದುಕಬೇಕು. ತ್ರಿಚಕ್ರ ವಾಹನದ ಮೂಲಕ ಹಲವಾರು ಉದ್ಯೋಗ ಕೈಕೊಳ್ಳಲು ಅವಕಾಶವಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ, -ಅಂಗ-ವಿ-ಕ-ಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕೊಡಮಾಡಿದ 20 ಅಂಗವಿಕಲರಿಗೆ ಶುಕ್ರವಾರ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು. ಅಮೆಜಾನ್, ಜೊಮ್ಯಾಟೋದಂತಹ ಕಂಪನಿಗಳು ಡೋರ್ ಡೆಲಿವರಿ ಉದ್ಯೋಗ ನೀಡುತ್ತವೆ. ಇಲ್ಲವೇ ಸ್ವತ@ ಸ್ವಸಹಾಯ ಸಂದವರು ತಯಾರಿಸಿದ ಆಹಾರ ಪದಾರ್ಥಗಳನ್ನು ಗ್ರಾಮಗಳಿಗೆ ತೆರಳಿ ಮಾರಾಟ ಮಾಡಲು ಅವಕಾಶ ಇದೆ. ಅಂಗ-ವಿ-ಕ-ಲ-ರು ಉದ್ಯೋಗ ಕೈಗೊಳ್ಳಲು ಬೇಕಾದ ನೆರ-ವು ನೀಡ-ಲು ಕತ್ತಿ ಕುಟುಂಬ ಸಿದಟಛಿವಿದೆ. ಮುಂಬರುವ ದಿನಗಳಲ್ಲಿ ಇನ್ನೂಳಿದ ವಿಕಲಚೇತನರಿಗೂ ತ್ರಿಚಕ್ರ ವಾಹನಗಳನ್ನು ಸರ್ಕಾ-ರ-ದಿಂದ ಕೊಡಿಸಲು ಶಾಸಕ ನಿಖಿಲ ಕತ್ತಿ ಅವರಿಗೆ ತಿಳಿಸುವುದಾಗಿ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಮುಖಂಡರಾದ ಸತ್ಯಪ್ಪ ನಾಯಿಕ, ಮಹಾವೀರ ನಿಲಜಗಿ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ದುರದುಂಡಿ ನಾಯಿಕ, ರಾಜೇಶ ಮುನ್ನೋಳಿ, ಭೀಮಗೌಡ ಗಿರಿಗೌಡನವರ, ಎ.ಕೆ.ಪಾಟೀಲ, ಸುಹಾಸ ನೂಲಿ, ಚನ್ನಪ್ಪ ಗಜಬರ, ನಾನಾಗೌಡ ಪಾಟೀಲ, ಅಧಿಕಾರಿಗಳಾದ ಎಂ.ಆರ್.ಡಬ್ಲು ಚಂದ್ರಕಾಂತ ತಳವಾರ, ಪುರಸಭೆಯ
ಸಂಜೀವ ಕರಿಗಾರ, ಸಿದ್ರಾಮ ಬಂಗಾರಿ, ರಾಜೇಂದ್ರ ಕಾಂಬಳೆ -ಇ-ತ-ರರು ಇ-ದ್ದ-ರು.