ಹುಕ್ಕೇರಿ: ಸಿಸಿ ರಸ್ತೆಗಳ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಕಾಮಗಾರಿ ನಂತರ ತೇವಾಂಶ ಆರದಂತೆ ಗಮನಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಕೊಟಬಾಗಿ ಗ್ರಾಮದ ಹೈಸ್ಕೂಲ್‌ನಿಂದ ಕದಂ ಮನೆವರೆಗೆ 20 ಲಕ್ಷ ರೂ. ವೆಚ್ಚದಲ್ಲಿ ಶುಕ್ರವಾರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಿರಢಾಣ ಮತ್ತು ಝಂಗಟಿಹಾಳ ಗ್ರಾಮದಲ್ಲಿ ತಲಾ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ನಂತರ ಝಂಗಟಿಹಾಳ ಗ್ರಾಮದ ಯಲ್ಲಾಲಿಂಗ ಪ್ರಭು ಮಹಾರಾಜ ಹಾಗೂ ಮರಡಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಮತ್ತು ಬೆಲ್ಲದ ಬಾಗೇವಾಡಿಯ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡರು.
ಗ್ರಾಪಂ ಅಧ್ಯಕ್ಷ ಬಸವರಾಜ ಭೂಸಾರಿ, ಸದಸ್ಯರಾದ ಉದ್ದಪ್ಪ ಕುಬಸಗಾರ, ಬಸವರಾಜ ಕೊಟಬಾಗಿ, ರಮೇಶ ಪಾಟೀಲ, ಯಲ್ಲಪ್ಪ ಪಾಟೀಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಘಟಿಗೆಪ್ಪ ಪೋಕಳಿ, ಪ್ರವೀಣ ಲಿಂಗನ್ನವರ, ಮಾರುತಿ ಉಬರಟ್ಟಿ, ಬಾಳಪ್ಪ ಪಾಟೀಲ, ಗ್ಯಾನಪ್ಪ ಡೂಗ, ಬಸವರಾಜ ಲಿಂಗನ್ನವರ, ಸಾಗರ ಮರಡಿ, ದುರ್ಗಪ್ಪ ಪಾಟೀಲ, ಅವಣ್ಣ ಪಾಟೀಲ, ಮಹಾದೇವ ಗೋಣಿ, ಚಿದಾನಂದ ಚಲವಾದಿ, ಮಾರುತಿ ಚಿಕ್ಕೋಡಿ ಇತರರಿದ್ದರು.