ಕೊಳ್ಳೇಗಾಲ: ದೇಶ ಸೇವೆಗೆ ಮಕ್ಕಳು ಆದ್ಯತೆ ನೀಡಬೇಕು ರಾಷ್ಟ್ರ ಸಂರಕ್ಷಣಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಟಿ.ಎಸ್.ರಾಮಕೃಷ್ಣ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಮತ್ತು ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಯನ್ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಲಯನ್ಸ್ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾವಕೈ ಸಮಾವೇಶದಲ್ಲಿ ಮಾತನಾಡಿದರು.
ಮಕ್ಕಳು ದೇಶದ ಭಾವೈಕ್ಯ ಹಾಗೂ ಸಂಸ್ಕೃತಿ ತಿಳಿಯಬೇಕು. ನಮ್ಮ ಆಲೋಚನೆಗಳು ತಾಂತ್ರಿಕ ಮಟ್ಟವನ್ನು ತಲುಪುವಂತೆ ಆಗಬೇಕು. ಜತೆಗೆ ಸಾಮಾಜಿಕ ವ್ಯವಸ್ಥೆ ಯೊಂದಿಗೆ ಜೀವನ ನಡೆಸವಂತಾಗಬೇಕು ಎಂದು ತಿಳಿಸಿದರು.
ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಸಾಮಾಜದಲ್ಲಿ ಬಡತನ, ನಿರುದ್ಯೋಗ, ಲಂಚಗುಳಿತನ ತಾಂಡವಾಡುತ್ತಿದೆ. ಬಡತದದಿಂದ ನಮ್ಮ ದೇಶದಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಭಿಕ್ಷಾಟನೆ ಪಿಡುಗಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಇವೆಲ್ಲವೂ ಸರಿಯಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಆಗ ದೇಶವನ್ನು ಮುನ್ನೆ ಸುವ ಶಕ್ತಿ ಅವರಿಗೆ ಸಿಗಲಿದೆ. ಇದರಿಂದ ಕ್ರಾಂತಿಕಾರಿಗಳ ಆತ್ಮಕ್ಕೆ ಶಾಂತಿ ಸಿಗುವಂತಾಗುತ್ತದೆ ಎಂದರು.
ಅನೇಕ ಸಂಘ-ಸಂಸ್ಥೆಗಳು ಪ್ರಪಂಚದ ಏಳಿಗೆಗಾಗಿ ದುಡಿಯುತ್ತಿವೆ ಆದರೂ ಶಾಂತಿ ನೆಲೆಸಿರುವಂತೆ ಕಾಣುತ್ತಿಲ್ಲ. ಇದಕ್ಕೆಲ್ಲ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿನ ದೂರದೃಷ್ಟಿ ಕೊರತೆ ಕಾರಣ ಎಂದು ತಿಳಿಸಿದರು.
ಈ ವೇಳೆ ಸ್ವಾತಂತ್ರ್ಯ ಚಳವಳಿಯಲ್ಲಿ ತ್ಯಾಗ ಬಲಿದಾನಗೈದ ನೂರಾರು ಕ್ರಾಂತಿಕಾರಿಗಳ ಕೊಡುಗೆಗಳ ಕುರಿತು ತಿಳಿಸುವ ಉದ್ದೇಶದಿಂದ ಸುಭಾಷ್ ಚಂದ್ರಬೋಸ್, ವಿಪಿನ್ ಗೋಪಾಲಕೃಷ್ಣ, ಲಾಲಾ ಲಜಪತ್ ರಾಯ್, ಗೋಖಲೆ, ಬಾಲಗಂಗಾಧರ ತಿಲಕ್, ಡಾ.ಬಿ.ಆರ್.ಅಂಬೇಡ್ಕರ್, ಸೇವಾ ದಳದ ಸಂಸ್ಥಾಪಕ ನಾ.ಸು. ಹರ್ಡಿಕರ್ ಬಿಳಿಯ ಬಟ್ಟೆಯ ಮೇಲೆ ಬರೆದಿರುವ ರೇಖಾಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಶ್ರೀಕಾಂತ್, ಶಿಕ್ಷಕರು, ಮಕ್ಕಳಿದ್ದರು.