ಕುಮಟಾ: ಹಿಂದೆ ಗುರುಕುಲ ಶಿಕ್ಷಣದಲ್ಲಿ ಜೀವನದ ಜತೆಗೆ ಉಪಜೀವನ ವಿದ್ಯೆ ಕಲಿಸುತ್ತಿದ್ದರು. ಇಂದು ವಿದ್ಯಾರ್ಥಿಗಳಿಗೆ ಉಪಜೀವನ ವಿದ್ಯೆ ಮಾತ್ರ ಕಲಿಸಲಾಗುತ್ತಿದೆ. ಮಕ್ಕಳಿಗೆ ಕಷ್ಟ ಕಾಲವನ್ನು ಎದುರಿಸುವ ರೀತಿ, ಉತ್ತಮ ಸಂಸ್ಕಾರ ಕಲಿಸುತ್ತಿಲ್ಲ. ಮಕ್ಕಳು ಸಂಸ್ಕಾರವಂತರಾದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮುಂಡಗೋಡದ ಅತ್ತಿವೇರಿಯ ಶ್ರೀ ಬಸವೇಶ್ವರಿ ಮಾತಾಜಿ ಹೇಳಿದರು.
ಪಟ್ಟಣದ ಕೊಂಕಣ ಎಜುಕೇಷನ್ ಟ್ರಸ್ಟ್ನಲ್ಲಿ ಗೋಪೂಜನ, ಮಾತಾಪಿತೃ ಪೂಜನ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾತೃಮಂಡಳಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಜನ್ಮದೊಡ್ಡದು, ಶಾಲೆಯೆಂದರೆ ಸ್ವರ್ಗಕ್ಕೆ ಸಮನಾದುದು ಎಂದರು.
ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಡುವುದು ತಾಯಂದಿರ ಕರ್ತವ್ಯ ಎಂದರು.
ಗೋಪೂಜೆಯ ಬಳಿಕ ಪುಟಾಣಿಗಳು ಭಗವದ್ಗೀತೆ, ಲಿಂಗಾಷ್ಠಕ ಪಠಣ ಮಾಡಿದರು. ಮಕ್ಕಳಿಂದ ಮಾತಾ ಪಿತೃಪೂಜನ ನಡೆಯಿತು.
ಪ್ರೌಢಶಾಲಾ ಮಾತೃಮಂಡಳಿಯ ಅಧ್ಯಕ್ಷರಾಗಿ ಮೇಘಾ ಡಿ. ಬಾಳಗಿ, ಉಪಾಧ್ಯಕ್ಷೆ ಜ್ಯೋತಿ ಎಸ್. ನಾಯ್ಕ, ಕಾರ್ಯದರ್ಶಿ ಗೌರಿ ಜಿ. ಭಟ್ಟ, ಸಹಕಾರ್ಯದರ್ಶಿ ಸ್ವಾತಿ ವಿ. ಶಾನಭಾಗ, ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ಮಾತೃಮಂಡಳಿಯ ಅಧ್ಯಕ್ಷೆಯಾಗಿ ಜ್ಯೋತಿ ಮೋಹನ ಅಂಬಿಗ, ಉಪಾಧ್ಯಕ್ಷೆ ಪ್ರಜ್ಞಾ ಪಿ. ಶಾನಭಾಗ , ಕಾರ್ಯದರ್ಶಿ ಜಯಾ ಆರ್. ನಾಯಕ, ಸಹಕಾರ್ಯದರ್ಶಿ ವನಿತಾ ಜಿ. ನಾಯಕ. ಬಾಲಮಂದಿರದ ಅಧ್ಯಕ್ಷರಾಗಿ ಆರಾಧ್ಯ ಆರ್. ಭಟ್ಟ, ಉಪಾಧ್ಯಕ್ಷೆ ಪೂಜಾ ಎಸ್. ಪ್ರಭು, ಕಾರ್ಯದರ್ಶಿ ತನುಜಾ ವಿ. ಪಟಗಾರ, ಸಹಕಾರ್ಯದರ್ಶಿ ವಿನುತಾ ಎಚ್. ವಿ. ಆಯ್ಕೆಯನ್ನು ಘೊಷಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ವಿ.ಆರ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಅಂಗಸಂಸ್ಥೆಗಳ ಪ್ರಾಚಾರ್ಯರು, ಮುಖ್ಯಶಿಕ್ಷಕರು ಇತರರಿದ್ದರು.
ಶ್ರೇಯಾ ಹೆಬ್ಬಾರ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಸಾವಿತ್ರಿ ಹೆಗಡೆ, ಶಿಕ್ಷಕ ಚಿದಾನಂದ ಭಂಡಾರಿ ಹಾಗೂ ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಅರ್ಚಕ ಶಶಿಧರ ಭಟ್ಟ ಪೂಜಾ ಕಾರ್ಯಕ್ರಮ ನೆರವೇರಿಸಿದರು.