ಹರಪನಹಳ್ಳಿ ಪೊಲೀಸ್ ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ಕಿರಣ ಶ್ಯಾನಭೋಗ್, ಮುಖ್ಯಶಿಕ್ಷಕ ಪ್ರಕಾಶ್, ನಿವೃತ್ತ ಶಿಕ್ಷಕರಾದ ನಾಗಪ್ಪ, ಲಕ್ಷ್ಮಣಭಟ್ರು, ರೇಣುಕಾಬಾಯಿ, ಸುಕನ್ಯಾ, ರೇಣುಕಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಹರಿಣಿಬಾಷ್, ಹಳೇ ವಿದ್ಯಾರ್ಥಿಗಳಾದ ರಾಜಶೇಖರ ಸವಣೂರು, ಆಂಜಿನಪ್ಪ, ಬಸವರಾಜ ಇದ್ದರು. 
ಜಿಲ್ಲೆ

ಗುರು-ಶಿಷ್ಯರ ಬಾಂಧವ್ಯ ವೃದ್ಧಿಸಲಿ: ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಆಶಯ

Gangavati - Desk - Veeresh S Ullagaddi

ಹರಪನಹಳ್ಳಿ: ಪ್ರಸ್ತುತ ದಿನಗಳಲ್ಲಿ ಗುರು-ಶಿಷ್ಯರ ಬಾಂಧವ್ಯ ಕಳಚುತ್ತಿರುವುದು ಖೇದಕರ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಹೇಳಿದರು.


ಪಟ್ಟಣದ ಪೊಲೀಸ್ ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 1988-89ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಗುರು ಮತ್ತು ಗುರಿ ಇತ್ತು, ಇಂದು ಕೂಡ ಇದೆ. ಆದರೆ ಯಾವ ಕಡೆಗೆ ವಿದ್ಯಾರ್ಥಿಗಳು ವಾಲುತ್ತಿದ್ದಾರೆ ಎನ್ನುವುದು ಮಾತ್ರ ತಿಳಿಯದಂತಾಗಿದೆ.

ಹಿಂದೆ ಶಿಷ್ಯಂದಿರು ಗುರುಗಳನ್ನು ಹುಡುಕಿಕೊಂಡು ಹೋಗಿ ಜ್ಞಾನ ಪಡೆಯುತ್ತಿದ್ದರು. ಪ್ರಸ್ತುತ ಶಿಕ್ಷಕರು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ಶಿಕ್ಷಣ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಹಳೆಯ ವಿದ್ಯಾರ್ಥಿ ಮಂಜುನಾಥ ಪೂಜಾರ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೂ ಶಿಕ್ಷಕರು ಇರುತ್ತಾರೆ. ಆದರೆ ಪ್ರಾಥಮಿಕ ಬುನಾದಿಯ ಶಿಕ್ಷಕರು ಕಲಿಸದೆ ಹೋದರೆ ನಾವು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನಮಗೆ ಬುನಾದಿ ಹಾಕಿದ ಶಿಕ್ಷಕರನ್ನು ಯಾವತ್ತೂ ಮರೆಯಬಾರದು ಎಂದರು.


ಹಳೆಯ ವಿದ್ಯಾರ್ಥಿಗಳು ಒಂದು ಎಲ್‌ಸಿಡಿ ಟಿವಿ, ಪೀಠೋಪಕರಣಗಳನ್ನು ಶಾಲೆಗೆ ಕೊಡುಗೆ ನೀಡಿದರು. ಶಾಲೆಯ ಮಕ್ಕಳಿಗೆ ನೋಟ್ ಬುಕ್, ಜಾಮಿಟ್ರಿ ಬಾಕ್ಸ್‌ಗಳನ್ನು ಉಚಿತವಾಗಿ ನೀಡಿದರು.

ಪುರಸಭೆ ಸದಸ್ಯ ಕಿರಣ ಶ್ಯಾನಭೋಗ್, ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ನಿವೃತ್ತ ಶಿಕ್ಷಕರಾದ ನಾಗಪ್ಪ, ಲಕ್ಷ್ಮಣಭಟ್ರು, ರೇಣುಕಾಬಾಯಿ, ಸುಕನ್ಯಾ ರೇಣುಕಮ್ಮ, ಎಸ್ಡಿಎಂಸಿ ಅಧ್ಯಕ್ಷ ಹರಿಣಿಬಾಷ್, ಹಿರಿಯ ವಿದ್ಯಾರ್ಥಿಗಳಾದ ರಾಜಶೇಖರ ಸವಣೂರು, ಆಂಜಿನಪ್ಪ, ಬಸವರಾಜ, ವೇಣುಗೋಪಾಲ, ವಿನಾಯಕ ಭಜಂತ್ರಿ ಇತರರಿದ್ದರು.