ದೇವರಹಿಪ್ಪರಗಿ: ಸಂಘದ ಬೆಳವಣಿಗೆಗೆ ಆಡಳಿತ ಮಂಡಳಿ, ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ಸಹಕಾರ ಭಾವನೆಯಿಂದ ಅವಿರತವಾಗಿ ಶ್ರಮಿಸಬೇಕೆಂದು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಸಹಕಾರ ಸಂಘಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ವೋದಯ ಸಹಕಾರ ಸಂಘ ಸರ್ವ ರೀತಿಯಲ್ಲಿ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಇದೇ ವೇಳೆ ಆಗಮಿಸಿದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರನ್ನು ಸಂಘದ ನಿರ್ದೇಶಕ ಮಂಡಳಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷ ರಾಜಶೇಖರ ಒಂಟೆತ್ತಿನ, ಉಪಾಧ್ಯಕ್ಷ ಶಾಂತಪ್ಪ ಸಜ್ಜನ, ನಿರ್ದೇಶಕರುಗಳಾದ ಶಿವು ಅತನೂರ, ಕಾಶೀನಾಥ ವಡ್ಡೋಡಗಿ, ಡಾ. ಕಾಶೀನಾಥ ಯಾಳಗಿ, ವಿನೋದ ಮಿಂಚನಾಳ, ಅಶ್ವಿನಿ ಹಿರೇಮಠ, ಮಂಜುಳಾ ಬಬಲೇಶ್ವರ, ನಬಿಸಾಬ್ ನದ್ಾ, ರಾಮನಗೌಡ ಪಾಟೀಲ, ಸುರೇಶ ಕೊಣ್ಣೂರ, ವಿನೋದ ಚವ್ಹಾಣ, ರಮೇಶ ಮೆಟಗಾರ ಇದ್ದರು.