ಜಿಲ್ಲೆ

ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿ


ಅರಕಲಗೂಡು : ತಾಲೂಕಿನಲ್ಲಿ ಮಳೆಯಿಂದ 170 ಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿ ಸಂಭವಿಸಿದ್ದು, ಕೂಡಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಮಂಜು ಸೂಚನೆ ನೀಡಿದರು.


ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನೀಡಲಾದ ಪರಿಹಾರದ ವಸ್ತುಗಳನ್ನು ಇತ್ತೀಚೆಗೆ ವಿತರಣೆ ಮಾಡಿ ಮಾತನಾಡಿದರು.


ಸರ್ಕಾರ ಮನೆ ಕಳೆದು ಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ 1.20 ಲಕ್ಷ ರೂ. ಪರಿಹಾರ ನಿಗದಿ ಮಾಡಿದೆ. ಈ ಹಣದಿಂದ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದು. ಆಯಾ ಗ್ರಾಮ ಪಂಚಾಯಿಗಳ ವಸತಿ ಯೋಜನೆಯಡಿ ಮನೆ ಕಳೆದುಕೊಂಡವರಿಗೆ ಮೊದಲ ಆದ್ಯತೆ ಮೇರೆಗೆ ನೀಡಬೇಕು ಎಂದು ಸೂಚನೆ ನೀಡಿದರು.


ರೆಡ್ ಕ್ರಾಸ್ ಹಾಸನ ಶಾಖೆಯ ಸಭಾಪತಿ ಹೆಮ್ಮಿಗೆ ಮೋಹನ್, ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ವೀರಭದ್ರಪ್ಪ, ಶಬೀರ್ ಅಹಮದ್, ಖಜಾಂಜಿ ಜಯೇಂದ್ರ ಕುಮಾರ್, ಅಮ್ಜದ್ ಖಾನ್, ಉದಯ ಕುಮಾರ್ ಗಿರಿಗೌಡ, ಹರ್ಷಿತ್, ಶಿವು, ಬಸವರಾಜು, ವಿರೂಪಾಕ್ಷ, ಪ್ರವೀಣ್, ಪೂನಾರಾಮ್, ರಾಮಚಂದ್ರ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶಂಕರ್ ಇತರರಿದ್ದರು.

13ಎಆರ್‌ಕೆ2..
ಅರಕಲಗೂಡಿನಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿ ಶಾಸಕ ಎ. ಮಂಜು ವಿವಿಧ ಪರಿಕಗಳನ್ನು ವಿತರಿಸಿದರು.