ಜಿಲ್ಲೆ

ಯುವಕರಲ್ಲಿ ಅಭಿಮಾನ, ಸ್ವಾಭಿಮಾನ ಬೆಳೆಯಲಿ

ಲಕ್ಷ್ಮೇಶ್ವರ: ದೇಶದ ಸಂಪತ್ತಾದ ಯುವ ಜನಾಂಗ ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಿಸ್ತು, ಆದರ್ಶ, ತತ್ವ, ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ನಾಗರಾಜ ಕುಲಕರ್ಣಿ ಹೇಳಿದರು. ಪಟ್ಟಣದ ಬಿಸಿಎನ್ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸಂಸ್ಕೃತಿ, ಸಂಪ್ರದಾಯ, ಮೌಲ್ಯ-ಚಿಂತನೆಗಳ ಬಗೆಗೆ ಭಾರತವಷ್ಟೇ ಅಲ್ಲದೆ, ವಿಶ್ವಕ್ಕೆ ಸದಭಿಪ್ರಾಯ, ಗೌರವ, ಅಭಿಮಾನ ಹಾಗೂ ಆಸಕ್ತಿ ಹೊಂದುವಂತೆ ಮಾಡಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಕರಲ್ಲಿ ದೇಶದ ಬಗ್ಗೆ ಅಭಿಮಾನ, ಸ್ವಾಭಿಮಾನ ಮೂಡಬೇಕು ಎಂದರು. ರಾಜಶೇಖರಸ್ವಾಮಿ ವಿ.ಜಿ., ರಮೇಶ ಗಿಣಿ, ನಾಗರತ್ನ ಸಿ. ಇತರರಿದ್ದರು.