ಜಿಲ್ಲೆ

ಶಿಕ್ಷಕರು ನಿಷ್ಠೆಯಿಂದ ಕೆಲಸ ಮಾಡಲಿ

ಉತ್ತರ ಕನ್ನಡ ಡೆಸ್ಕ್

ಹಂಸಭಾವಿ: ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಕನ್ನಡ ಶಾಲೆಗಳು ಅವನತಿ ಹೊಂದುತ್ತಿವೆ. ಶಿಕ್ಷಕರಾದವರು ನಿಷ್ಠೆಯಿಂದ ಕೆಲಸ ಮಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸ್ಥಳಿಯ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಿರ್ಮಾಣವಾದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಜನ ಮೆಚ್ಚುವ ಕೆಲಸ ಮಾಡಬೇಕು. ಅವಶ್ಯವಿದ್ದವರಿಗೆ ಸೌಲಭ್ಯಗಳು ದೊರಕಬೇಕು. ಇಲ್ಲಿಯ ಆಡಳಿತ ಮಂಡಳಿಯವರು ನಿಸ್ವಾರ್ಥದಿಂದ ಸಂಸ್ಥೆ ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ನೀಡುತ್ತಿದ್ದು, ಇಲ್ಲಿ ಕಲಿತ ಬಿ.ಜಿ. ಬಣಕಾರ, ಬಿ.ಎಚ್. ಬನ್ನಿಕೋಡ, ಬಿ.ಸಿ. ಪಾಟೀಲ, ಯು.ಬಿ. ಬಣಕಾರ ಉತ್ತಮ ರಾಜಕಾರಣಿಗಳಾಗಿದ್ದಾರೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ತಿಪ್ಪೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಜಿ.ಆರ್. ಕೆಂಚಕ್ಕನವರ ಮಾತನಾಡಿದರು. ತಹಸೀಲ್ದಾರ್ ಎಚ್.ಪ್ರಭಾಕರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ಸಂಸ್ಥೆಯ ಸದಸ್ಯರಾದ ಪ್ರಭಣ್ಣ ಬಳಗಾನೂರ, ಲಿಂಗರಾಜ ಎಲಿ, ಕ.ಮಾ.ಶಾ.ನೌಕರರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಬಿ. ಸಾವಜ್ಜಿ, ಎಸ್.ಎಲ್. ಕಾಡದೇವರಮಠ, ಕಾರ್ಯದರ್ಶಿ ಎನ್.ಎನ್. ಕೊಂದೂರ, ಹಿರೇಕೆರೂರ ತಾಲೂಕು ಕ.ಮಾ.ಶಾ. ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಬೆಟ್ಟಳ್ಳೇರ, ಮಹಾವಿದ್ಯಾಲಯದ ಹಾಗೂ ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು. ಎಸ್.ವಿ. ಪಾಟೀಲ ಸ್ವಾಗತಿಸಿದರು. ಪಲ್ಲವಿ ಬೋಳಕಟ್ಟಿ, ಕೆ.ವಿ. ಜಪ್ಪ, ಬಸಮ್ಮ ಹಮ್ಮಿಣಿ ನಿರ್ವಹಿಸಿದರು. ಎಸ್.ಎಫ್. ಕಲ್ಲಣ್ಣನವರ ವಂದಿಸಿದರು.