ಜಿಲ್ಲೆ

ತಂತ್ರಜ್ಞಾನಕ್ಕೆ ತಕ್ಕಂತೆ ಅಧ್ಯಯನವಿರಲಿ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು.

ಶಿಕ್ಷಣ ತಜ್ಞ ಡಾ. ಪ್ರಸಾದ ರೂಡಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು. ಶಿಸ್ತು ಮೈಗೂಡಿಸಿಕೊಳ್ಳಬೇಕು. ಇಂದಿನ ತಂತ್ರಜ್ಞಾನವನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ಆರ್.ಟಿ. ಜಂಗಲ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು. ಇದರಿಂದ ಯಶಸ್ಸಿನ ಹಾದಿ ಸುಲಭವಾಗಲಿದೆ ಎಂದರು.

ಅಶೋಕ ಇಟಗಿ, ವಿ.ಕೆ. ರಡ್ಡೇರ, ದೀಪಕ ಪಾಟೀಲ, ಉಮೇಶ ಪಾಟೀಲ, ವೈ.ಕೆ. ಪಾಟೀಲ, ಕೆ.ಬಿ. ಲಕ್ಕಣ್ಣವರ, ವಿ.ಎಸ್. ಭೀಮರಡ್ಡಿ, ಎಚ್.ಎಚ್. ಕಿರೇಸೂರ, ವನಿತಾ ಮಹೇಂದ್ರಕರ, ಶಂಕರ ಕುಂಬಾರ ಇತರರು ಇದ್ದರು.

ಪ್ರಾಚಾರ್ಯ ಎಸ್.ಬಿ. ಸಣಗೌಡರ ಸ್ವಾಗತಸಿದರು. ವಸಂತ ಯಾದವ, ಪ್ರಿಯಾಂಕಾ ಮುಳಗುಂದ ನಿರೂಪಿಸಿದರು. ಸಚಿನ ಮಾಚಾ ವಂದಿಸಿದರು.