ಜಿಲ್ಲೆ

ವಿದ್ಯಾರ್ಥಿಗಳು-ಶಿಕ್ಷಕರಲ್ಲಿ ಮೂಡಲಿ ಕನ್ನಡಾಭಿಮಾನ

Avinash R

ಕುಂಬಳೆ: ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸಬೇಕು ಎಂದು ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ ಹೇಳಿದರು.

ಕೇರಳ ಪ್ರಾಂತ್ಯ ಕನ್ನಡ ವಾಧ್ಯಮ ಅಧ್ಯಾಪಕರ ಸಂದ ಕಾಸರಗೋಡು, ಬೇಕಲ ಹೊಸದುರ್ಗ ಉಪಜಿಲ್ಲಾ ಸಮ್ಮೇಳನವನ್ನು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಇತ್ತೀಚೆಗೆ ಉದ್ಘಾಟಿಸಿ ವಾತನಾಡಿದರು.

ಕಾಸರಗೋಡು ಉಪಜಿಲ್ಲಾ ಟಕದ ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಸಂದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ., ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಟಕದ ಸಂಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯಶಿಕ್ಷಕ ಶ್ಯಾಮ್ ಭಟ್, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಮುಖ್ಯ ಅತಿಥಿಗಳಾಗಿದ್ದರು. ಕೇಂದ್ರ ಸಮಿತಿ ಕೋಶಾಧಿಕಾರಿ ಶರತ್ ಕುವಾರ್, ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ವಿನೋದ್ ರಾಜ್, ಕೋಶಾಧಿಕಾರಿ ಕುಶ ಉಪಸ್ಥಿತರಿದ್ದರು.

2023-24ನೇ ವರ್ಷದಲ್ಲಿ ಎಲ್.ಎಸ್.ಎಸ್., ಯು.ಎಸ್.ಎಸ್. ವಿಜೇತರಾದ ಕನ್ನಡ ವಾಧ್ಯಮ ವಿದ್ಯಾರ್ಥಿಗಳನ್ನು ಹಾಗೂ ಉಪಜಿಲ್ಲಾ ಕಲೋತ್ಸವದ ಎಲ್.ಪಿ. ವಿಭಾಗದ ಕನ್ನಡ ಅಭಿನಯ ಗೀತೆ ಮತ್ತು ಕಥೆ ಹೇಳುವ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಕಾಸರಗೋಡು ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಪೂರ್ಣಿವಾ ಸ್ವಾಗತಿಸಿದರು. ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುವಾರಿ ಪ್ರಸ್ತಾವಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಬಾಬು ನಿರೂಪಿಸಿದರು. ಬೇಕಲ ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ ವಂದಿಸಿದರು.

ನೂತನ ಸಮಿತಿ ರಚನೆ

ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಸಮಿತಿ ರಚಿಸಲಾಯಿತು. ಕಾಸರಗೋಡು ಉಪಜಿಲ್ಲಾ ಟಕದ ಅಧ್ಯಕ್ಷರಾಗಿ ಯಶೋದಾ, ಕಾರ್ಯದರ್ಶಿಯಾಗಿ ಪೂರ್ಣಿವಾ, ಕೋಶಾಧಿಕಾರಿಯಾಗಿ ಕುಶ ಹಾಗೂ ಬೇಕಲ-ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷರಾಗಿ ರಜನಿ ಕುವಾರಿ, ಕಾರ್ಯದರ್ಶಿಯಾಗಿ ಧನ್ಯಶ್ರೀ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಪ್ರಸಾದ್ ಆಯ್ಕೆಯಾದರು.