ಕಂಪ್ಲಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನಿಲಯ ಪಾಲಕ ಕೆ.ವಿರುಪಾಕ್ಷಪ್ಪ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕ ಜೆ.ಎನ್.ಗಣೇಶ್, ತಹಸೀಲ್ದಾರ್ ಗೌಸಿಯಾಬೇಗಮ್, ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಕೆ.ವಿರುಪಾಕ್ಷಪ್ಪ, ಡಾ.ಅನ್ನಪೂರ್ಣ ಗುಡದೂರು ಇತರರಿದ್ದರು. 
ಜಿಲ್ಲೆ

ಸಂವಿಧಾನದ ಮಹತ್ವ ವಿದ್ಯಾರ್ಥಿಗಳು ತಿಳಿದುಕೊಳ್ಳಲಿ

Gangavati - Desk - Veeresh S Ullagaddi

ಕಂಪ್ಲಿ: ಪ್ರತಿಯೊಬ್ಬರು ಸಂವಿಧಾನ ಪ್ರಸ್ತಾವನೆ ಓದಿ ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.


ಪಟ್ಟಣದ ಸತ್ಯನಾರಾಯಣಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಸಮಾಜ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಭಾರತ ಸಂವಿಧಾನ ಪ್ರಸ್ತಾವನೆ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು. ಅಂಬೇಡ್ಕರ್ ಸರ್ವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿ ಸಮಾನತೆ, ಜಾತ್ಯಾತೀತತೆ, ಸಮಗ್ರತೆ, ಏಕತೆ, ಮನೋಧರ್ಮವನ್ನು ಭಾರತೀಯರಲ್ಲಿ ಪ್ರೇರೇಪಿಸಿದ್ದಾರೆ ಎಂದರು.


ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು. ವಿದ್ಯಾರ್ಥಿಗಳು ಸಂವಿಧಾನದ ಅರ್ಥ, ಪ್ರಾಮುಖ್ಯತೆ, ವಿಶೇಷತೆಯನ್ನು ಅಧ್ಯಯನ ಮಾಡಬೇಕು. ಸಂವಿಧಾನ ನೀಡಿರುವ ಹಕ್ಕು ಕರ್ತವ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ನಿಲಯ ಪಾಲಕ ಕೆ.ವಿರುಪಾಕ್ಷಪ್ಪ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಡಿಟಿ ಬಿ.ರವೀಂದ್ರಕುಮಾರ್, ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದರೂರು, ಉಪಪ್ರಾಚಾರ್ಯರಾದ ಬಸವರಾಜಪಾಟೀಲ್, ಟಿ.ಎಂ.ಬಸವರಾಜ್, ಸಿಆರ್‌ಪಿಗಳಾದ ಈರೇಶಿ, ಹನುಮಂತಪ್ಪ, ರೇಣುಕಾರಾಧ್ಯ, ವಿದ್ಯಾರ್ಥಿಗಳು ಇದ್ದರು.