ನಿಪ್ಪಾಣಿ: ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೊಲ್ಲಾಪುರದ ಎಚ್.ಶಾಹು ಇನ್‌ಸ್ಟಿಟ್ಯೂಟ್ ಆಫ್ ಬಿಜಿನೆಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ಕೇಂದ್ರದ ಡೀನ್ ಡಾ.ಸುಧಾಕರ ಭೋಟೆ ಹೇಳಿದರು.
ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಮಟ್ಟದ ವಿದ್ಯಾರ್ಥಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಂಶೋಧನೆಯಲ್ಲಿ ಕೃತಿಸ್ವಾಮ್ಯ, ಕೃತಿಸ್ವಾಮ್ಯದ ಉಲ್ಲಂಘನೆ ಮತ್ತು ಕಾಯ್ದೆ, ಕೃತಿಸ್ವಾಮ್ಯದ ಪ್ರಯೋಜನ ಮುಂತಾದ ವಿಷಯಗಳ ಕುರಿತು ತಿಳಿಸಿದರು.
ಪಾಚಾರ್ಯ ಡಾ.ಎಂ.ಎಂ.ಹುರಳಿ, ಉಪಪ್ರಾಚಾರ್ಯ ಡಾ.ಆರ್.ಜಿ.ಖರಾಬೆ, ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಅಶೋಕ ರಾಠೋಡ ಮಾತನಾಡಿದರು. ವಿವಿಧ ಮಹಾವಿದ್ಯಾಲಯದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಇಪಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಜೇನಿಕಾ ಓಸ್ವಾಲ್ ಪ್ರಥಮ, ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಸುರಭಿ ಸುರಂಗಿ ದ್ವಿತೀಯ ಮತ್ತು ಪ್ರಾಜಕ್ತಾ ಲಾಟಕೆ ತೃತೀಯ ಬಹುಮಾನ ಪಡೆದುಕೊಂಡರು. ವಿಎಸ್‌ಎಂ ತಾಂತ್ರಿಕ ಮಹಾವಿದ್ಯಾಲಯದ ಡಾ.ಅನುಪ ಗಂಜಿ ತೀರ್ಪುಗಾರರಾಗಿ ಆಗಮಿಸಿದ್ದರು.
ವಿದ್ಯಾರ್ಥಿನಿ ಚೈತ್ರಾ ಕೌಲಾಪುರೆ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗಂಗಾಂಬಿಕಾ ಚೌಗಲಾ ಸ್ವಾಗತಿಸಿದರು. ಗಿರಿಜಾ ಚಂಡಕೆ ಹಾಗೂ ನಮಿತಾ ನಾಯಿಕ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ ವಂದಿಸಿದರು.