ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಅಶೋಕ ನರೋಡೆ ಚಿತ್ರಿಸಿದ, ಸಾಹಿತಿ ಪ್ರಕಾಶ ಕೋಟಿನತೋಟ ರಚಿಸಿದ ಜೀವನ ಚರಿತ್ರೆ ಸಂಪುಟ ಬಿಡುಗಡೆಗೊಳಿಸಲಾಯಿತು. ಶ್ರೀಶೈಲ ಕಂಕನವಾಡಿ, ಡಾ.ಕೆ.ಎಂ. ಅವರಾದಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಉತ್ತಮ ಮೌಲ್ಯ ಬೆಳೆಸಿಕೊಳ್ಳಲಿ

Vijayapura - Desk - Gurappa Lokuri

ಮಹಾಲಿಂಗಪುರ: ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಬಾಗಲಕೋಟೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಪಾಲಕರ ಸಮಾವೇಶ ಮತ್ತು ಜೀವನ ಚರಿತ್ರೆ ಸಂಪುಟ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗುರು ಕರೆದೊಯ್ಯುವ ಗುರಿಯಡೆಗೆ ನಿಮ್ಮ ಚಿತ್ತ ಇರಲಿ ಎಂದು ತಿಳಿಸಿದರು.

ಪದವಿ ಕಾಲೇಜ್ ಪ್ರಾಚಾರ್ಯ ಡಾ. ಕೆ. ಎಂ. ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದರೆ ಶಿಕ್ಷಕರಿಗೆ ಹಾಗೂ ಸಂಸ್ಥೆಗೆ ಹೆಮ್ಮೆಯ ವಿಷಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಗುರಿಯೆಡೆ ಗಮನಹರಿಸಬೇಕು ಎಂದರು.

ಹಿರಿಯ ಸಾಹಿತಿ ಡಾ. ಅಶೋಕ ನರೋಡೆ ಚಿತ್ರಿಸಿದ ಹಾಗೂ ಸಾಹಿತಿ ಪ್ರಕಾಶ ಕೋಟಿನತೋಟ ರಚಿಸಿದ ಜೀವನ ಚರಿತ್ರೆ ಸಂಪುಟ ಗ್ರಂಥವನ್ನು ಡಾ. ರಾಧಾಕೃಷ್ಣನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಶಿಧರ ಉಳ್ಳೇಗಡ್ಡಿ ಬಿಡುಗಡೆಗೊಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಸಂಯೋಜಕ ಡಾ. ಅಶೋಕ ನರೋಡೆ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪ್ರೊ. ಶಿವಾನಂದ ಮೆಳವಂಕಿ, ಸಾಹಿತಿ ಪ್ರಾಕಾಶ ಕೋಟಿನತೋಟ, ಉಪನ್ಯಾಸಕ ಶಿವಲಿಂಗ ಸಿದ್ನಾಳ, ದೀಪಾ ಅಮ್ಮಣಗಿ ಇತರರಿದ್ದರು.

ಜಯಮಂಗಲಾ ಪಾಟೀಲ ಗ್ರಂಥ ಸಮರ್ಪಣೆ ಮಾಡಿದರು. ಐ.ಸಿ. ಶಿರೋಳ ನಿರೂಪಿಸಿ, ವಂದಿಸಿದರು.