ಬೇಲೂರು: ವಿದ್ಯಾರ್ಥಿಗಳಾಗಿದ್ದಾಗಲೇ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹಿರಾ ಪಬ್ಲಿಕ್ ಶಾಲೆ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ಹೇಳಿದರು.
ತಾಲೂಕಿನ ಅರೇಹಳ್ಳಿ ಹಿರಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ಯಾಂಟೀನ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ವ್ಯಾವಹಾರಿಕ ಜ್ಞಾನ ಗಳಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಶಾಲಾ ಆವರಣ ವಿದ್ಯಾರ್ಥಿಗಳಿಗಾಗಿ ಕ್ಯಾಂಟೀನ್ ಡೇ ಆಯೋಜಿಸಲಾಗಿದೆ. ಇದರಿಂದ ಲಾಭ ಮತ್ತು ನಷ್ಟದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಪದಾರ್ಥಗಳ ಮಾರಾಟ ಮೂಲಕ ಸುಲಭವಾಗಿ ಆದಾಯ ಮತ್ತು ನಷ್ಟ ಲೆಕ್ಕಹಾಕಲು ಪ್ರಯತ್ನಿಸುತ್ತಾರೆ ಎಂದರು.
ಅರೇಹಳ್ಳಿ ಹಿರಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಹಿಝಾರ್ ಅಸರ್ ಉಮ್ರಿ, ವ್ಯವಸ್ಥಾಪಕ ಜುಬೇರ್ ಅಹ್ಮದ್, ಮುಖ್ಯಶಿಕ್ಷಕಿ ತಬಸ್ಸುಮ್ ಬಾನು, ಶಿಕ್ಷಕಿಯರು, ವಿದ್ಯಾರ್ಥಿ ಪಾಲಕರು ಭಾಗವಹಿಸಿದ್ದರು.