ಜಿಲ್ಲೆ

ವಿದ್ಯಾರ್ಥಿಗಳು ಕನ್ನಡದ ರಾಯಭಾರಿಯಾಗಲಿ

ವಿದ್ಯಾ ಶೆಟ್ಟನಗೌಡ್ರ

ನಿಪ್ಪಾಣಿ: ಯುವಪೀಳಿಗೆ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿಯುತ್ತಿದ್ದರೂ ನಾಡು-ಭಾಷೆ, ನೆಲೆ ಮೂಲ ಮರೆಯಬಾರದು. ಕನ್ನಡ ಬಳಕೆಯಲ್ಲಿ ನಮ್ಮೆಲ್ಲರ ಅಸ್ತಿತ್ವವಿದೆ ಎಂದರಿತು ಪ್ರತಿ ವಿದ್ಯಾರ್ಥಿ ಕನ್ನಡದ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ನಿಪ್ಪಾಣಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ವಿಜಯ ಧಾರವಾಡ ಹೇಳಿದರು.

ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರೇರಿತ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಮಾತೃಭಾಷೆಯೇ ಮೂಲವಾಗಿದ್ದು, ಅನ್ನಕ್ಕೂ ದಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಮಾತನಾಡಿ, ಕನ್ನಡ ಸೇವೆ ಮಾಡುವ ಪ್ರತಿಜ್ಞೆ ತೆಗೆದುಕೊಂಡರೆ ನಾಡು ಅಭಿವೃದ್ಧಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳಿಂದ ಜನಪದ ನೃತ್ಯ, ಗಾಯನ, ಹಾಸ್ಯ ಕವನ ವಾಚನ, ಡೊಳ್ಳು ಕುಣಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಡಾ.ಸತೀಶ ನಾಯಕ, ಡಾ.ಎಸ್.ಎಂ.ರಾಯಮಾನೆ, ಡಾ.ಎಂ.ಡಿ.ಗುರವ, ಮಂಜುಳಾ ಕೆ., ಬಿ.ಜಿ.ಉಳ್ಳೇಗಡ್ಡಿ, ಡಾ.ಆನಂದ ಕೆಂಚಕ್ಕನವರ, ಮಹೇಶ ಕೆಂಚಗೌಡರ, ಡಾ.ಅಶೋಕ ರಾಠೋಡ, ಪ್ರಿಯಾಂಕಾ ಕಮತೆ, ಕಾವ್ಯಾಶ್ರೀ ಕುಮ್ಮುರ, ರೇವತಿ ಗಿರಮಲ್ಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಜನಗೌಡ, ಹಿಂದಿ ವಿಭಾಗದ ಅಧ್ಯಾಪಕ ಶಂಕರಮೂರ್ತಿ ಕೆ.ಎನ್., ಆರತಿ ಪಾಟೀಲ, ಸ್ನೇಹಾ ಘಾಟಗೆ, ಪ್ರೀತಿ ಸಾವಗಾಂವೆ ಇತರರಿದ್ದರು.