ಬಾದಾಮಿಯ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25 ನೇ ಸಾಲಿನ ಬಿ.ಎ ಹಾಗೂ ಬಿ.ಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಮತ್ತು ಎನ್‌ಎಸ್‌ಎಸ್, ಕ್ರೀಡಾ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಎಲ್ಲ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು. ಡಾ. ಎಂ.ಎನ್. ಸಿದ್ಧಲಿಂಗಪ್ಪನವರ, ಡಾ.ಎಂ.ನಂಜುಂಡಸ್ವಾಮಿ, ಆರ್.ಎಸ್.ಪೂಜಾರ, ಹನಮಂತ ಜೋಗಿನ, ಬಿ.ಎಂ.ಕಲ್ಲೂರ ಮತ್ತಿತರರಿದ್ದಾರೆ. 
ಜಿಲ್ಲೆ

ವಿದ್ಯಾರ್ಥಿಗಳಿಗೆ ವರ್ತಮಾನದ ಅರಿವಿರಲಿ

ವಿನಯ ಆಶೋಕ ನಾಯ್ಕ

ಬಾದಾಮಿ: ವಿದ್ಯಾರ್ಥಿಗಳು ವರ್ತಮಾನದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಚರ್ಚಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಎಚ್ಚರಿಕೆಯಿಂದ ಬಳಸುವುದರ ಜತೆಗೆ ಸಾಮಾಜಿಕ ಜವಾಬ್ದಾರಿಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬಾದಾಮಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಸೇನ ಚಿಮ್ಮನಕಟ್ಟಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಬಿಎ ಹಾಗೂ ಬಿಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಮತ್ತು ಎನ್‌ಎಸ್‌ಎಸ್, ಕ್ರೀಡಾ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಎಲ್ಲ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ‘ಆಚ್ಝಚ್ಞ್ಚಛಿ ್ಕಛಿಜಜಿಟ್ಞಚ್ಝ ಈಛಿಛ್ಝಿಟಞಛ್ಞಿಠಿ ಜ್ಞಿ ಓಚ್ಟ್ಞಠಿ : ಐಠ್ಠಛಿ ಚ್ಞ ಇಚ್ಝ್ಝಛ್ಞಿಜಛಿ‘ ಎಂಬ ವಿಷಯದ ಸಂಪಾದಕೀಯ ಗ್ರಂಥಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಹೆಚ್ಚುವರಿ ಎರಡು ಕೋಟಿ ರೂಪಾಯಿಗಳ ಅನುದಾನ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ ಎಂದರು.

ಪ್ರಾಚಾರ್ಯ ಡಾ. ಎಂ.ಎನ್. ಸಿದ್ಧಲಿಂಗಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಮಹಾವಿದ್ಯಾಲಯದ ಸರ್ವ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆಯನ್ನು ಮಾಡುವ ಛಲ ಬೆಳೆಸಿಕೊಳ್ಳಬೇಕು ಎಂದರು.

ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎಂ. ನಂಜುಂಡಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅತ್ಯುತ್ತಮ ಛಾಯಾಗ್ರಾಹಕ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಐ. ಬಾರಾವಲಿ, ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ ದತ್ತಿ ಪ್ರಶಸ್ತಿಗೆ ಭಾಜನರಾದ ಪ್ರೊ. ಚಂದ್ರಶೇಖರ್ ಹೆಗಡೆ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದ ಖೋ-ಖೋ ತಂಡಕ್ಕೆ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ವಿದ್ಯಾರ್ಥಿನಿ ಅಕ್ಷತಾ ವಡ್ಡರ ಅವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ಕ್ರೀಡಾಕೂಟ ಹಾಗೂ ವಿವಿಧ ಸಾಂಸಕ್ಕತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಎಸ್. ಪೂಜಾರ, ಹನಮಂತ ಜೋಗಿನ, ಬಿ.ಎಂ. ಕಲ್ಲೂರ, ಬಸವರಾಜ ಕೆರೂರ, ಪ್ರೊ. ಜಯಪ್ರಕಾಶ ಬೀಳಗಿ, ಡಾ. ಸೀಮಾ ಜಿ.ಕೆ., ಪ್ರೊ. ರ್ಇಾನ್ ಬಾಷಾ, ಪ್ರೊ. ಕವಿತಾ ಜಂಗವಾಡ, ಪ್ರೊ. ಬಾಬುರಾಯಣ್ಣ ಧನ್ನೂರ, ಪ್ರೊ. ಗೋವರ್ಧನ ಪಿ.ಬಿ, ಡಾ. ವಿ.ಬಿ. ಸಣ್ಣಸಕ್ಕರಗೌಡ್ರ ಮತ್ತಿತರರಿದ್ದಾರೆ. ಬಸಮ್ಮ ಡಾಣಕಶಿರೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೆ.ಬಿ.ಹೂಗಾರ ಇವರು ಸ್ಚಾಗತಿಸಿದರು. ಈಶ್ವರಪ್ಪ ಹಾಳಿ ನಿರೂಪಿಸಿದರು. ಚೈತ್ರಾ ಅರಭಾವಿಯವರು ವಂದಿಸಿದರು.