ವಿಜಯಪುರ : ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರವಿರಬೇಕು. ಸಂಸ್ಕಾರಯುತ ಜೀವನ ನಡೆಸಿ ಕೌಟುಂಬಿಕ, ಸಾಮಾಜಿಕ, ಮಾನವೀಯ, ನೈತಿಕ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಸದೃಢ ಭಾರತ ಕಟ್ಟಲು ಪಣತೊಡಬೇಕು ಎಂದು ಉಪನ್ಯಾಸಕ ನಾಗರಾಜ ಎ. ಹೇಳಿದರು.
ನಗರದ ವಿದ್ಯಾವರ್ಧಕ ಸಂದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸಂಯಮ, ವಿನಯ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸ್ವಚ್ಛತೆ, ಆರೋಗ್ಯ, ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕು ಎಂದರು.
ಚುನಾವಣೆಯಲ್ಲಿ ಧೀರಜ ಕುಲಕರ್ಣಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂದೀಪ ಬೇನೂರ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಪನ್ಯಾಸ ಬಿ.ಬಿ. ಪಾಟೀಲ ಚುನಾವಣೆಯ ನೇತೃತ್ವ ವಹಿಸಿದ್ದರು. ಸಂದ ಅಧ್ಯಕ್ಷ ರಾಜೇಶ ದರಬಾರ, ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ, ಜಂಟಿ ಕಾರ್ಯದರ್ಶಿ ಸೋಮನಗೌಡ ಪಾಟೀಲ (ಸಾಸನೂರ), ಸಮನ್ವಯಾಧಿಕಾರಿ ಡಾ. ವಿ.ಬಿ. ಗ್ರಾಮಪುರೋಹಿತ, ಪ್ರಾಚಾರ್ಯ ಟಿ.ಆರ್. ಕುಲಕರ್ಣಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಭಿನಂದಿಸಿದರು.
ವಿಜಯಪುರದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.