ಜಿಲ್ಲೆ

ಸಿದ್ದರಾಮಯ್ಯ ಬಾದಾಮಿಯಲ್ಲೇ ಗೆದ್ದು ತೋರಿಸಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಸವಾಲು

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮೇಲೆ ಭರವಸೆ ಇದ್ದರೆ ಬಾದಾಮಿಯಲ್ಲಿಯೇ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಸವಾಲು ಹಾಕಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೇರೆ ಕ್ಷೇತ್ರ ಹುಡುಕುವುದು ಯಾಕೆ? ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮೋತ್ಸವ ಹೆಸರಿನಲ್ಲಿ ಜನ್ಮದಿನಾಚರಿಸಲು ಹೊರಟಿದ್ದಾರೆ. ಇದೇ ಕಾಂಗ್ರೆಸ್​ನವರಿಗೆ ದೊಡ್ಡ ವಿಷಯವಾಗಿದೆ. ಅವರಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವುದು ಬೇಕಾಗಿಲ್ಲ, ಸಮಯವೂ ಇಲ್ಲ ಎಂದು ವ್ಯಂಗ್ಯವಾಡಿದರು.
ಇದೀಗ ಡಿ.ಕೆ. ಶಿವಕುಮಾರ ತಮಗೆ ಒಕ್ಕಲಿಗರ ಮತಗಳು ಬೀಳುತ್ತವೆ. ನಾನು ಮುಖ್ಯಮಂತ್ರಿ ಆಗಬೇಕೆಂದು ಹೇಳಿದರೆ, ಹಿಂದುಳಿದ ವರ್ಗದವರ ಮತ ತನಗೆ ಬೀಳುತ್ತವೆಂದು ಸಿದ್ದರಾಮಯ್ಯ ಮುಖ್ಯಮಂತ್ರಿ ರೇಸ್​ನಲ್ಲಿದ್ದಾರೆ. ಇವರಿಬ್ಬರ ಒಳ ಜಗಳದಿಂದಲೇ ಕಾಂಗ್ರೆಸ್​ನ ಅವನತಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಜಿಎಸ್​ಟಿ ಕೌನ್ಸಿಲ್​ನಲ್ಲಿ ಚರ್ಚೆ ಆಗಿ ದರ ನಿಗದಿಪಡಿಸಲಾಗಿದೆ. ಎಲ್ಲ ರಾಜ್ಯಗಳ ಸದಸ್ಯರು ಬಂದಿರುತ್ತಾರೆ. ವಿಸõತ ಚರ್ಚೆ ಆಗಿರುತ್ತದೆ. ಆದರೂ ಈಗ ವಿರೋಧ ಮಾಡುವುದು ಸರಿಯಲ್ಲ. ರಾಜಕೀಯ ಮಾಡಬಾರದು ಎಂದರು.