ಗೋಳಿಯಂಗಡಿಯಲ್ಲಿ ಬಾಲಗೋಕುಲ ತರಗತಿ ಉದ್ಘಾಟಿಸಿದರು.  
ಜಿಲ್ಲೆ

ಬಾಲ್ಯದಿಂದಲೇ ಧಾರ್ಮಿಕ ಶ್ರದ್ಧೆ ಮೈಗೂಡಿಸಿಕೊಳ್ಳಲಿ

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಶ್ರದ್ಧೆ, ಶ್ರೇಷ್ಠ ಸಂಸ್ಕಾರಗಳನ್ನು ಕಲಿಸಿ, ಅವುಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಲ್ಲಿ ಬಾಲಗೋಕುಲ ತರಗತಿಗಳು ಪ್ರೇರಣೆಯಾಗಲಿವೆ. ಮಕ್ಕಳಲ್ಲಿ ಧಾರ್ಮಿಕತೆ, ಸನಾತನ ಧರ್ಮ, ಸಂಸ್ಕೃತಿ, ಉತ್ತಮ ಸಂಸ್ಕಾರ ಆಚರಣೆಗಳನ್ನು ಕಲಿಸಬೇಕು ಎಂದು ಆರ್ಡಿ ಬೆಳ್ವೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪಟ್ಟಾಭಿರಾಮ್ ಭಟ್ ಮರೂರು ಹೇಳಿದರು.

ಗೋಳಿಯಂಗಡಿ ಶ್ರೀ ಅನ್ನಪೂರ್ಣೇಶ್ವರಿ ಸದಾಶಿವ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಉಡುಪಿ ಜಿಲ್ಲೆ ಗ್ರಾಮ ವಿಕಾಸ ನೇತೃತ್ವದಲ್ಲಿ ಆರಂಭವಾದ ಬಾಲಗೋಕುಲ ತರಗತಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ವಿಭಾಗ ಗ್ರಾಮ ವಿಕಾಸ ಬಾಲ ಗೋಕುಲ ಸಂಯೋಜಕ ಜಿತೇಂದ್ರ, ಸದಸ್ಯೆ ರಮಿತಾ ಶೈಲೇಂದ್ರ, ಉಡುಪಿ ಜಿಲ್ಲಾ ಗ್ರಾಮ ವಿಕಾಸ ಶಿಕ್ಷಾ ಮತ್ತು ಸಂಸ್ಕಾರ ಸಂಯೋಜಕಿ ಉಷಾ ಪಿ.ಶೆಟ್ಟಿ, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಮಾಜಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಆರ್ಡಿ, ಬೆಳ್ವೆ ಶ್ರೀ ಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ, ನಿವೃತ್ತ ಮುಖ್ಯಶಿಕ್ಷಕ ಸುರೇಶ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಸದಸ್ಯ ಜಯಪ್ರಕಾಶ್ ಶೆಟ್ಟಿ ಗೋಳಿಯಂಗಡಿ, ಚಂದ್ರ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಲತಾ ಹೆಗ್ಡೆ ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ ಆರ್ಡಿ ನಿರೂಪಿಸಿದರು. ಆಸ್ವಿತಾ ವಂದಿಸಿದರು.