ತೇರದಾಳ ಪಟ್ಟಣದ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಯ 33ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಮಕ್ಕಳಿಂದ ಪಾಲಕರ ಹಾಗೂ ಗುರುಗಳ ಪಾದಪೂಜೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಅರ್ಚಕ ಮಹಾಲಿಂಗಯ್ಯ ಘಂಟಿ, ಆಡಳಿತಮಂಡಳಿ, ಪಾಲಕರು ಇದ್ದರು. 
ಜಿಲ್ಲೆ

ಪಾಲಕರು ಮಕ್ಕಳ ಚಟುವಟಿಕೆ ಮೇಲೆ ನಿಗಾವಹಿಸಲಿ

ತೇರದಾಳ: ಪಟ್ಟಣದ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ 33ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಮಕ್ಕಳಿಂದ ಪಾಲಕರ ಹಾಗೂ ಗುರುಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು.

ಅರ್ಚಕ ರಾಂಪುರದ ಮಹಾಲಿಂಗಯ್ಯ ಘಂಟಿ ಅವರು ವಿಧಿಬದ್ಧವಾಗಿ ಮಕ್ಕಳಿಂದ ಪಾಲಕರ ಪಾದಪೂಜೆ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಪಾಲಕದ್ದಾಗಿದೆ. ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿದರೆ ಸಾಲದು. ಅವರ ಚಟುವಟಿಕೆ ಮೇಲೆ ಪಾಲಕರು ನಿಗಾವಹಿಸಬೇಕೆಂದು ಹೇಳಿದರು.

ಪಾಲಕರ ಹಾಗೂ ಮಕ್ಕಳ ಕರ್ತವ್ಯ ಕುರಿತಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪಾಲಕರಾದ ಭರತೇಶ ಆಲಗೂರ, ರಾಜು ದೇವಲಾಪೂರಮಠ, ಪಾರ್ವತಿ ಗೋಠಡಕಿ ಮಾತನಾಡಿ, ಪಾಲಕರ ಪಾದಪೂಜೆಯಂತಹ ವಿಶೇಷ ಕಾರ್ಯಕ್ರಮದಿಂದ ಮಕ್ಕಳಿಗೆ ಪಾಲಕರ ಮೇಲಿನ ಗೌರವ ಹೆಚ್ಚಾಗಿ, ಭಾರತೀಯ ಸಂಸ್ಕೃತಿಯ ಭಾಗವಾಗವಾಗಿರುವ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.

ಸಂಘದ ಅಧ್ಯಕ್ಷ ಪರಪ್ಪ ಆಲಗುಂಡಿ, ಸುಭಾಸ ಕಂಪುನವರ, ಪಾಲಕರು, ಶಾಲೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.