ಆನೇಕಲ್​ನ ಶ್ರೀ ರಾಮಕುಟಿರದಲ್ಲಿ ಆಯೋಜಿಸಿದ್ದ ಗುರುವಂದನಾ ಮಹೋತ್ಸವದಲ್ಲಿ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗಮಿತ್ರ ಪತ್ರಿಕೆಯನ್ನು ಶಾಸಕ ಬಿ.ಶಿವಣ್ಣ ವಿತರಿಸಿದರು. 
ಜಿಲ್ಲೆ

ಸಂಘ-ಸಂಸ್ಥೆಗಳು ಬಡವರ ನೆರವಿಗೆ ನಿಲ್ಲಲಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​: ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಪಟ್ಟಣದ ಶ್ರೀ ರಾಮಕುಟಿರದಲ್ಲಿ ಬುಧವಾರ ಆನೇಕಲ್​ ಚಂದನ ಸೇವಾ ಟ್ರಸ್ಟ್​ ಉದ್ಘಾಟನೆ ಹಾಗೂ ರೇಣುಕಾ ಆರಾಧ್ಯ ಕಲಾವಿದರ ಬಳಗ ಶ್ರೀ ಕ್ಷೇತ್ರ ಗೆರಟಿಗನಬಲೆ ಸಹಯೋಗದಲ್ಲಿ ಆಯೋಜಿಸಿದ್ದ ಗುರುವಂದನ ಮಹೋತ್ಸವದಲ್ಲಿ ಮಾತನಾಡಿದರು. ಬದಲಾವಣೆ ಎನ್ನುವುದು ಮಾತಿನಿಂದ ಸಾಧ್ಯವಾಗದು. ಪ್ರತಿಯೊಬ್ಬರೂ ಬದಲಾವಣೆಗೆ ಕೈಜೋಡಿಸಬೇಕು. ಬಡವರ ನೆರವಿಗೆ ನಿಲ್ಲುವ ಜವಾಬ್ದಾರಿ ಸಂ&ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳದ್ದಾಗಿದೆ. ಟ್ರಸ್ಟ್​ ವಿದ್ಯಾರ್ಥಿಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಮಿತ್ರ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು. ಇತ್ತೀಚಿನ ದಿನಗಳಲ್ಲಿ ರಂಗ ಕಲೆಗಳು ಹಾಗೂ ನಾಟಕಗಳು ಕಡಿಮೆ ಆಗುತ್ತಿವೆ. ಇಂತಹ ಸಂದರ್ಭದಲ್ಲಿ, ಕಲಾವಿದರನ್ನು ಗುರುತಿಸಲು ಮುಂದಾಗಿರುವುದು ಉತ್ತಮ ಕಾರ್ಯ. ನಮ್ಮ ಕಲೆ ಸಂಸತಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ಹೇಳಿದರು.

ರಾಜಾಪುರ ಸಂಸ್ಥಾನ ಮಠದ ಶ್ರೀ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಮನುಷ್ಯ ಜೀವಿತಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಗಡಿನಾಡು ರಂಗಭೂಮಿ ಕಲಾವಿದರು, ಡ್ರಾಮಾ ನಿರ್ದೇಶಕರು ಸೇರಿ ಹಲವು ಕ್ಷೇತ್ರಗಳಲ್ಲಿ ನಾಡು&ನುಡಿ ರಂಗ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಕಾರ್ಮಿಕರನ್ನು ಆನೇಕಲ್​ನಲ್ಲಿ ಕಾರ್ಯಕ್ರಮ ಆಯೋಜಿಸಿ ಅವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಟಿ.ನರಸೀಪುರ ತಾಲೂಕಿನ ವರಳಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ನಂದನ್​ ತಬಲಾ ನುಡಿಸುವ ಮೂಲಕ ಗಮನ ಸೆಳೆದರು. ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿ, ಪುರಸಭೆ ಸದಸ್ಯ ರಾಜೇಂದ್ರ ಪ್ರಸಾದ್​, ಉಪೆಂದ್ರ, ವಿಜಯ್​ ಕುಮಾರ್​, ಮಾದೇಶ್​, ರಾಮನಗರ ರಾಮು, ರಾಮಸ್ವಾಮಿ, ದೇವನಹಳ್ಳಿ ಪ್ರಕಾಶ್​, ಮುನಿಸ್ವಾಮಿ, ರಾಜಾರೆಡ್ಡಿ, ಲೊಕೇಶ್​, ಅನಿಲ್​ ಕುಮಾರ್​, ಎಂ.ಸಾಗರ್​, ಸಿ.ಶ್ರೀನಿವಾಸ್​, ಚಂದ್ರಪ್ಪ, ಮಲ್ಲಿಕಾರ್ಜುನ್​, ಉದಯ್​ ಗುರುಚರಣ್​, ಗೋವಿಂದ ರಾಜು, ಶಂಕರ್​, ಗಿರೀಶ್​ ಇತರರು ಇದ್ದರು.‘

ಆನೇಕಲ್​ ಚಂದನ ಸೇವಾ ಟ್ರಸ್ಟ್​ ಉದ್ಘಾಟಿಸಲಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು ಎನ್ನುವ ನಿಟ್ಟಿನಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ನೀಡುವುದು ಹಾಗೂ ಸಾಂಸತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಇದು ನಿರಂತರವಾಗಿ ಸಾಗಲಿದೆ. | ಮಲ್ಲಿಕಾರ್ಜುನ್​ ಆರಾಧ್ಯ ಆನೇಕಲ್​ ಚಂದನ ಸೇವಾ ಟ್ರಸ್ಟ್​ ಮುಖ್ಯಸ್ಥ ಎಲ್ಲ ವರ್ಗದವರನ್ನು ಗುರುತಿಸುವ ಕೆಲಸ ಅಲ್ಲಲ್ಲಿ ಆಗುತ್ತದೆ. ಆದರೆ ರಂಗಕರ್ಮಿಗಳನ್ನು ಗುರುತಿಸುವ ಕೆಲಸ ಆಗುವುದು ಕಡಿಮೆ. ಕಲೆ, ಸಂಸತಿ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ನಾಲ್ಕೆ$ದು ವರ್ಷದಿಂದ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. | ರೇಣುಕಾರಾಧ್ಯ ರೇಣುಕಾ ಆರಾಧ್ಯ ಕಲಾವಿದರ ಬಳಗದ ಮುಖ್ಯಸ್ಥ