ಜಿಲ್ಲೆ

ಹಳೇ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಶ್ರಮಿಸಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲೆಯ ಹಳೇ ವಿದ್ಯಾರ್ಥಿಗಳು ತಾವು ವ್ಯಾಸಾಂಗ ಮಾಡಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸಲು ಸಂಘಟಿತರಾಗಬೇಕು ಎಂದು ಪ್ರೌಢ ಶಾಲಾ ನಿವೃತ್ತ ಅಧ್ಯಾಪಕ ಎಸ್​.ಎಲ್​. ಎಮ್ಮಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯ 1987-88ನೇ ಶೈಕ್ಷಣಿಕ ವರ್ಷದ ಹಳೇ ವಿದ್ಯಾಥಿರ್ಗಳು ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮಗೆ ಪಾಠ ಮಾಡಿದ ಗುರುಗಳನ್ನು ನೆನಪಿಸಿಕೊಂಡು ಅವರನ್ನು ಗೌರವಿಸುವುದು ಶ್ರೇಷ್ಠ ಪರಂಪರೆೆ. ಈ ನಿಟ್ಟಿನಲ್ಲಿ ಮತ್ತೆ ಗುರು-ಶಿಷ್ಯರ ಸಮಾಗಮ ಆಗುವುದರಿಂದ ಉಭಯತರಿಗೂ ಸಂತೋಷ, ಸಂತೃಪ್ತಿ, ಸಮಾಧಾನ ಪ್ರಾಪ್ತವಾಗುತ್ತದೆ ಎಂದರು.
ನಿವೃತ್ತ ಅಧ್ಯಾಪಕರಾದ ಆರ್​.ಎಸ್​. ಗುಲಗಂಜಿಕೊಪ್ಪ, ಎನ್​.ಬಿ.ಪವಾರ, ವಿ.ಬಿ.ಕೆಂಚನಗೌಡರ, ಪುಷ್ಪಾ ಬಾಗಲವಾಡಿ, ಎಸ್​.ವೈ. ಪೂಜಾರ, ಚೆನ್ನಮ್ಮ ನೀರಲಕಟ್ಟಿ, ಸುಮನ ಬೋಂಗಾಳೆ ಅವರನ್ನು ಹಳೇ ವಿದ್ಯಾರ್ಥಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಹಳೇ ವಿದ್ಯಾರ್ಥಿ ಬಳಗದ ಸದಾನಂದ ಮುಂದಿನಮನಿ, ಶಂಕರ ಶಿಂಧೆ, ಅಡಿವೆಪ್ಪ ತಳವಾರ, ಪತ್ರೆಪ್ಪ ಚಿಕ್ಕನರಗುಂದ, ಮಲ್ಲಿಕಾರ್ಜುನ ಮಠಪತಿ, ನಂದಾ ನವಲಗುಂದ, ಕೃಷ್ಣ ಬೋಂಗಾಳೆ, ಸುಭಾಷ ದೇಶಪಾಂಡೆ, ಶಂಕರ ಪೂಜಾರ, ಇತರರು ಇದ್ದರು.