ಕಂಪ್ಲಿಯಲ್ಲಿ ಆಯೋಜಿಸಿದ್ದ ಪ್ರಗತಿಪರ ಸಮಾನ ಮನಸ್ಕರ ವೇದಿಕೆಯ ಸಂಘಟನಾ ಸಭೆಯಲ್ಲಿ ವೇದಿಕೆ ಮುಖ್ಯ ಸಂಚಾಲಕ ವಿ.ಎಸ್.ಶಿವಶಂಕರ ಮಾತನಾಡಿದರು. ಪ್ರಮುಖರಾದ ವಸಂತರಾಜ ಕಹಳೆ, ಎಸ್.ಬಸವರಾಜ, ಎಸ್.ಬಸವರಾಜ, ಸಣಾಪುರ ಮರಿಸ್ವಾಮಿ, ಖುರ್ಷಿದಾಬೇಗಮ್, ಐ.ಹೊನ್ನೂರಸಾಬ್, ಆರ್.ನಾಗರಾಜ, ಎಚ್.ಸಂಜೀವ, ಎಚ್.ಬಸಪ್ಪ, ಎಸ್.ಬಸವರಾಜ, ಜೆ.ಉಮೇಶ ಇತರರಿದ್ದರು.ಕಂಪ್ಲಿ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರ ದಿನಾಚರಣೆಯಲ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಹಸೀಲ್ದಾರ್ ಎಸ್.ಶಿವರಾಜ, ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಕೆ.ದುರುಗಣ್ಣ, ಸುಜಾತಾ ಇದ್ದರು. 
ಜಿಲ್ಲೆ

ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸಲಿ

ರುದ್ರಪ್ಪ ವಾಲಿ

ಕಂಪ್ಲಿ: ಪಟ್ಟಣದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಜನಕೇಂದ್ರಿತ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರಗತಿಪರ ಸಮಾನ ಮನಸ್ಕರ ವೇದಿಕೆಯ ಮುಖ್ಯ ಸಂಚಾಲಕ ವಿ.ಎಸ್.ಶಿವಶಂಕರ ಹೇಳಿದರು.

ಇಲ್ಲಿನ ಅತಿಥಿಗೃಹ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವೇದಿಕೆ ಸಂಘಟನಾ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಸಹಕಾರಿ ಇಲ್ಲವೇ ಸರ್ಕಾರಿ ವಲಯದ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು. ಸಮರ್ಪಕ ಪ್ರಮಾಣದಲ್ಲಿ ನಿರಂತರ ಶುದ್ಧ ಕುಡಿವ ನೀರು ಪೂರೈಸಬೇಕು. ನಿವೇಶನ ರಹಿತರಿಗೆ ನಿವೇಶನ ವಿತರಿಸಬೇಕು. ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸಬೇಕು. ಗಂಗಾವತಿ-ದರೋಜಿ ರೈಲು ಸಂಪರ್ಕಕ್ಕೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಫೆ.13ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ವೇದಿಕೆ ಸಂಚಾಲಕ ವಸಂತರಾಜ ಕಹಳೆ ಮಾತನಾಡಿ, ಕಂಪ್ಲಿ ತಾಲೂಕು ಕೇಂದ್ರವಾಗಿ ಏಳು ವರ್ಷಗಳಾಗುತ್ತ ಬಂದರೂ ಪೂರ್ಣಪ್ರಮಾಣದ ತಾಲೂಕು ಕಚೇರಿಗಳು ಆರಂಭಗೊಂಡಿಲ್ಲ. ಅಗತ್ಯ ಇಲಾಖೆ ಸೇವೆಗಳಿಗೆ ನೆರೆಹೊರೆ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಓಡಾಟ ನಡೆಸಬೇಕಿದೆ. ಪೂರ್ಣಪ್ರಮಾಣದ ತಾಲೂಕು ಕಚೇರಿಗಳನ್ನು ಆರಂಭಿಸುವಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.