ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಸಾಹಿತಿಗೆ ಸಾವಿದೆ, ಆದರೆ ಸಾಹಿತ್ಯ ಎಂದೂ ಸಾಯುವುದಿಲ್ಲ. ಮಕ್ಕಳಿಂದ ಸಾಹಿತ್ಯ ಕ್ಷೇತ್ರ ಬೆಳೆಸುವ ಕೆಲಸ ಆಗಬೇಕು ಎಂದು ಕಸಾಪ ಪುತ್ತೂರು ತಾಲೂಕು ಹೋಬಳಿ ಘಟಕ ಅಧ್ಯಕ್ಷ ಕಡಮಜಲು ಸುಭಾಷ್ ರೈ ಹೇಳಿದರು.
ಬಡಗನ್ನೂರು ಗ್ರಾಪಂನಲ್ಲಿ, ಕಸಾಪ ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಬಡಗನ್ನೂರು ಗ್ರಾಪಂ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗ ಮತ್ತು ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಸಂಯೋಜನೆಯಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡಗನ್ನೂರು ಶಾಲೆಯ ವಿದ್ಯಾರ್ಥಿನಿ ವಿಸ್ಮಿತಾ ಎಂ. ಮಾತನಾಡಿ, ಸಾಹಿತ್ಯ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಪ್ರತಿಯೊಬ್ಬರೂ ಸಾಹಿತ್ಯ ಪ್ರೀತಿಸುವಂತಾಗಬೇಕು ಎಂದರು.
ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ದೇವಕಜೆ ಉದ್ಘಾಟಿಸಿದರು. ಸನ್ಮಾನ ಸ್ವೀಕರಿಸಿದ ಮಹಮ್ಮದ್ ಬಡಗನ್ನೂರು, ಬಡಗನ್ನೂರು ಪಿಡಿಒ ಮೋನಪ್ಪ ಕೆ. ಮಾತನಾಡಿದರು.
ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಬಡಗನ್ನೂರು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಬಡಗನ್ನೂರು ಶಾಲೆ ಮುಖ್ಯಶಿಕ್ಷಕಿ ಹರಿಣಾಕ್ಷಿ ಎ. ಸ್ವಾಗತಿಸಿದರು. ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಸಿದರು. ಅಕ್ಷತಾ ನಾಗಕಜೆ ವಂದಿಸಿದರು. ಕೊಯಿಲ ಶಾಲಾ ಶಿಕ್ಷಕ ಗಿರೀಶ್, ವಿದ್ಯಾಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ನಿವೃತ್ತ ಶಿಕ್ಷಕ ಕೆ.ಸಿ.ಪಾಟಾಳಿ ಪಡುಮಲೆ, ವಿದುಷಿ ನಯನಾ ವಿ.ರೈ ಕುದ್ಕಾಡಿ, ಉಪನ್ಯಾಸಕ, ದೈವನರ್ತಕ ಡಾ.ರವೀಶ್ ಪಡುಮಲೆ, ಉಪನ್ಯಾಸಕ ಡಾ.ಹರಿಪ್ರಸಾದ್ ಎಸ್, ಸಾಹಿತಿ ವಿದ್ಯಾಶ್ರೀ ರೈ, ನಾಟಿವೈದ್ಯ ವಿಶ್ವನಾಥ ಪೂಜಾರಿ, ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ, ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು, ಯಕ್ಷ ಕಲಾವಿದ ನಾಗಪ್ಪ ಪಡುಮಲೆ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಕೆ.ರಾಮಣ್ಣ ಗೌಡ ಬಸವನಹಿತ್ತಿಲು ಅಭಿನಂದಿಸಿ ಮಾತನಾಡಿದರು.
ಸಮಾರೋಪ
ಸಮಾರೋಪದಲ್ಲಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮತ್ ರಮೀಸ ಸಮಾರೋಪ ಭಾಷಣ ಮಾಡಿದರು. ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮುಖ್ಯ ಅಥಿಯಾಗಿದ್ದರು. ಕಸಾಪ ಪುತ್ತೂರು ತಾಲೂಕು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಅಧ್ಯಕ್ಷತೆ ವಹಿಸಿದ್ದರು. ಸುಳ್ಯಪದವು ಬಾಲಸುಬ್ರಹ್ಮಣ್ಯ ಶಾಲೆಯ ಶಿಕ್ಷಕಿ ಪ್ರೀತಾ ಎನ್, ಬಡಗನ್ನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ ಮತ್ತಿತರರು ಇದ್ದರು.