ಹಳಿಯಾಳ: ಇತ್ತೀಚಿನ ದಿನಗಳಲ್ಲಿ ಎಲ್‌ಲ್ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಆಚರಣೆಗಳು ಆಚರಣೆಯಾಗಿಯೇ ಉಳಿಯದೆ ಇದರಲ್ಲಿ ಶೇ.10 ಜನ ಸುಧಾರಿಸಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.
ತಾಲೂಕಾಡಳಿತ, ತಾಫಂ, ಪುರಸಭೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರುಗಳ ಜಯಂತ್ಯುತ್ಸವದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬದುಕು ಹರಿಯುವ ನೀರಿನಂತಿರಬೇಕು. ಆಗ ಮಾತ್ರ ಬದುಕಿನಲ್ಲಿ ಲವಲವಿಕೆ ಉಳಿದುಕೊಳ್ಳಲು ಸಾಧ್ಯ ಎಂದರು.
ತಹಸೀಲ್ದಾರ್ ಜಿ.ಕೆ. ರತ್ನಾಕರ್, ತಾಪಂ ಅಧಿಕಾರಿ ಪರಶುರಾಮ ಘಸ್ತೆ, ಗೀತಪ್ಪಾ ಭಜಂತ್ರಿ, ಸಂತೋಷ ರೇಣಕೆ, ಉಮೇಶ ಬೊಳಶೆಟ್ಟಿ, ಶಾಂತಾರಾಮ ಚಿಬ್ಬುಲಕರ ಇತರರು ಇದ್ದರು.