ಜಿಲ್ಲೆ

ಕನ್ನಡ ಕೃತಿಗಳು ಬೇರೆ ಭಾಷೆಗೆ ಅನುವಾದವಾಗಲಿ: ನಾಡೋಜ ಡಾ.ವೂಡೇ ಪಿ.ಕೃಷ್ಣ ಆಶಯ

ಬೆಂಗಳೂರು: ಕನ್ನಡ ಕತಿಗಳು ಬರೀ ಭಾಷೆಗೆ ಮಾತ್ರ ಸೀಮಿತವಾಗದೆ ಬೇರೆ ಭಾಷೆಗಳಿಗೆ ಅನುವಾದವಾಗಬೇಕು ಎಂದು ನಾಡೋಜ ಡಾ.ವೂಡೇ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ಶೇಷಾದ್ರಿಪುರ ಶಿಕ್ಷಣ ದತ್ತಿ ಸಂಸ್ಥೆ ಸಹಯೋಗದಲ್ಲಿ ಕಮಲಾ&ಹಂಪನಾ ಸಾಹಿತ್ಯ ವೇದಿಕೆ, ಶನಿವಾರ ಶೇಷಾದ್ರಿಪುರ ಕಾಲೇಜಿನಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು,

ಯಾವುದೇ ಸಾಹಿತ್ಯವು ಒಂದು ಭಾಷೆ ಅಥವಾ ಗಡಿಗೆ ಸೀಮಿತವಾಗದೆ ಮೀರಿ ಬೆಳೆಯಬೇಕು. ಚಾರುವಸಂತ ಕತಿ ತೆಲುಗು, ಮರಾಠಿ, ಹಿಂದಿ ಮತ್ತು ಇಂಗ್ಲಿಷ್​ ಸೇರಿ 15ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ. ಪ್ರೊ.ಹಂಪ ನಾಗರಾಜಯ್ಯರ ಸಾಹಿತ್ಯ ಶ್ರೀಮಂತವಾದದ್ದು, ಮುಂದಿನ ದಿನದಲ್ಲಿ ಅವರನ್ನು ಇಡೀ ಪ್ರಪಂಚವೇ ನೆನೆಯಲಿದೆ. ಕನ್ನಡ ಸಾಹಿತ್ಯಕ್ಕೆ ಹಂಪನಾ ಕೊಡುಗೆ ವಿಶೇಷವಾದದ್ದು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯೆ ಡಾ.ಮಾನಸ ಮಾತನಾಡಿ, ಚಾರುವಸಂತ ಕತಿ ಹಲವು ಭಾಷೆಗಳ ಎಲ್ಲೆ ಮೀರಿ ದೇಶದಾದ್ಯಂತ ಹರಡಿದೆ. ಇಂತಹ ಸಾಧನೆಯ ಕತಿ ಮತ್ತೊಂದಿಲ್ಲ. ಲಕ್ಷಾಂತರ ಜನರನ್ನು ದಶ್ಯ ಪ್ರದರ್ಶನದ ಮೂಲಕ ಜನರ ಮನಸ್ಸು ಗೆದ್ದಿದೆ. ಈ ಕತಿಯಿಂದ ಕನ್ನಡಕ್ಕೆ ಮತ್ತಷ್ಟು ಗೌರವ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿರಿಯ ಸಂಶೋಧಕ ಹಂಪನಾ ಬರೆದಿರುವ "ಚಾರು ವಸಂತ' ಕೃತಿಯನ್ನು ಅಸ್ಸಾಂನ ಪ್ರಸಿದ್ಧ ಕವಿ ಅಂಕುರ್​ ರಂಜನ್​ ಪುಕನ್​, ಅಸ್ಸಾಮಿ ಭಾಷೆಗೆ ಅನುವಾದಿಸಿದ್ದು, ಈ ಕೃತಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಹಿರಿಯ ಸಂಶೋಧಕ ಹಂಪನಾ, ಬಂಗಾಲದ ಹಿರಿಯ ಕವಿ ಶ್ಯಾಮಲ ಭಟ್ಟಾಚಾರ್ಯ, ಅಸ್ಸಾಮಿನ ಕವಿ ಅನುಭವ್​ ತುಳಸಿ ಮತ್ತಿತರರಿದ್ದರು.