ನಂಜನಗೂಡು: ತಾಲೂಕಿನ ಹೆಡಿಯಾಲ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ವಿಭಾಗ ವತಿಯಿಂದ ಗುರುವಾರ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನ ಆಚರಿಸಲಾಯಿತು.
ಹೆಡಿಯಾಲ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶಂಭಲಿಂಗಪ್ಪ, ಮುಖ್ಯ ಶಿಕ್ಷಕ ಶಿವಲಿಂಗಪ್ಪ, ಪಣಿರಾಜ್, ಗೋವಿಂದರಾಜ್, ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಸಹ ಕಾರ್ಯದರ್ಶಿ ಕಂದಸ್ವಾಮಿ, ರೇವಣ್ಣ, ಚನ್ನಬಸಪ್ಪ, ಗಿರೀಶ್, ಮಹದೇವಸ್ವಾಮಿ, ಸಿದ್ದರಾಜು. ಪುಟ್ಟರಾಜು, ಹೇಮಂತ್‌ಕುಮಾರ್, ವೆಂಕಟೇಶ್, ಶಿವಣ್ಣ, ಶೇಷಾದ್ರಿ, ಸತೀಶ್, ಮಹಾದೇವಸ್ವಾಮಿ, ಮಹೇಶ್ ಮತ್ತಿತರರು ಇದ್ದರು.