ಮೆಟಗುಡ್ಡ ಸರ್ಕಾರಿ ಕಿರಿಯ ಪ್ರಥಾಮಿಕ ಡೋಣಿ ಅವರ ತೋಟದ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಿತ ಕಾವ್ಯ ಶಾಲಾ ಪತ್ರಿಕೆಯನ್ನು ಮಕ್ಕಳು ಬಿಡುಗಡೆಗೊಳಿಸಿದರು. ಸುರೇಶ ರಾಜಮಾನೆ, ರಮೇಶ ಡೋಣಿ, ಸದಸ್ಯ ಕರಿಯಪ್ಪ ದಳವಾಯಿ ಇತರರಿದ್ದರು. 
ಜಿಲ್ಲೆ

ಕನ್ನಡ ಭಾಷೆ ಬದುಕಿನ ಭಾಷೆಯಾಗಲಿ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ತಾಲೂಕಿನ ಮಟಗುಡ್ಡ ಸರ್ಕಾರಿ ಕಿರಿಯ ಪ್ರಾಥಮಿಕ ಡೋಣಿ ಅವರ ತೋಟದ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಡೋಣಿ ಹಾಗೂ ಸದಸ್ಯ ಕರಿಯಪ್ಪ ದಳವಾಯಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಮಕ್ಕಳು ಕನ್ನಡ ನಾಡಿನ ಮಹಾನ್ ಸಾಧಕರ, ಕವಿಗಳ ಹಾಗೂ ವಿಜ್ಞಾನಿಗಳ ಪರಿಚಯ ಮಾಡಿಕೊಟ್ಟರು. ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಕವಿಗಳ ಹಾಗೂ ಜಿಲ್ಲೆಯ, ತಾಲೂಕಿನ ಹಾಗೂ ಸ್ಥಳೀಯ ಕವಿಗಳ ಪರಿಚಯ ಹೊಂದಿರುವ ಕೈಬರಹದ ಶಾಲೆ ಪತ್ರಿಕೆ ಭಾವಚಿತ್ರಿತ ಕಾವ್ಯ ಬಿಡುಗಡೆಗೊಳಿಸಲಾಯಿತು.

ಸುರೇಶ ರಾಜಮಾನೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಮುಖ್ಯ. ಮನೆಯಲ್ಲಿ ಗ್ಲಾಸ್, ಪ್ಲೇಟ್, ಸ್ಫೂನ್‌ನಂತಹ ಶಬ್ದಗಳನ್ನು ಬಳಸುವುದನ್ನು ಕಡಿಮೆಮಾಡಿ ಲೋಟ, ತಟ್ಟೆ, ಚಮಚ ಹೀಗೆ ಪದಗಳ ಬಳಕೆ ಆಗಬೇಕು. ಆಂಗ್ಲಭಾಷೆ ಜ್ಞಾನಕ್ಕಾಗಿ ಮಾತ್ರ ಇರಲಿ, ಕನ್ನಡ ಭಾಷೆ ಬದುಕಿನ ಭಾಷೆಯಾಗಲಿ ಎಂದರು.

ರಾಜೇಂದ್ರ ಸುತಾರ, ರಾಣಿ ಇಂಡಿಗನಾಳ, ಎ.ಜಿ. ದಳವಾಯಿ, ಆಗೋಜಿ ತಹಸೀಲ್ದಾರ್, ಕೆ.ಎಲ್. ಇಟ್ಟನ್ನವರ ಇತರರಿದ್ದರು.