ಸಿರುಗುಪ್ಪ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ನುಡಿ ಸೊಬಗು ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಾಯಿತು. ವಿಶ್ವಜ್ಯೋತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಸವಲಿಂಗಪ್ಪ, ಕಾರ್ಯದರ್ಶಿ ಮಂಗಳಗೌರಿ, ಹಾಸ್ಯ ಕಲಾವಿದ ಜೆ.ನರಸಿಂಹಮೂರ್ತಿ, ನಿರ್ದೇಶಕ ವಿವೇಕ,ಪ್ರಾಂಶುಪಾಲ ಶಿವಪ್ರಕಾಶ ಇತರರಿದ್ದರು. 
ಜಿಲ್ಲೆ

ಕನ್ನಡಕ್ಕೆ ಮೊದಲ ಆದ್ಯತೆ ನೀಡಲಿ

ರುದ್ರಪ್ಪ ವಾಲಿ

ಸಿರಗುಪ್ಪ: ಕನ್ನಡ ಭಾಷೆಯಲ್ಲಿ ಓದಿದ ನಾವುಗಳು ಮಾತೃ ಭಾಷೆಯನ್ನು ಪ್ರೀತಿಸಬೇಕು ಬೇರೆ ಭಾಷೆಯನ್ನು ಗೌರವಿಸಬೇಕು ಎಂದು ವಿಶ್ವಜ್ಯೋತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಸವಲಿಂಗಪ್ಪ ಹೇಳಿದರು.

ಇಲ್ಲಿನ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ನುಡಿ ಸೊಬಗು ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ನ.1 ರಿಂದ 30ರವರಗೆ ಕನ್ನಡ ಕಾರ್ಯಕ್ರಮಗಳನ್ನು ನೆರವೇರಿಸಿ. ಇಡೀ ಒಂದು ದಿನ ಕನ್ನಡದ ಹಾಡು, ನೃತ್ಯ, ಕುಣಿತ, ಕನ್ನಡಕ್ಕಾಗಿ ಹೋರಾಡಿದವರ ಚರಿತ್ರೆ ರೂಪಕಗಳು, ಮತ್ತು ಕನ್ನಡದ ದೇವಾಲಯಗಳ ಕುರಿತು ತಿಳಿಸಿಕೊಟ್ಟಿರುವುದು ಸ್ಮರಿಸುವಂತದ್ದು. ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಒಟ್ಟು 56ಕಾರ್ಯಕ್ರಮಗಳನ್ನು ಈ ದಿನ ಪ್ರಸ್ತುತಪಡಿಸುತ್ತಿದ್ದೇವೆ ಎಂದರು.

ಹಾಸ್ಯ ಕಲಾವಿದ ಜೆ.ನರಸಿಂಹಮೂರ್ತಿ ಮಾತನಾಡಿ, ಕನ್ನಡದ ಭಾಷೆ ಸಂಸ್ಕೃತಿ ಸಂಪೂರ್ಣವಾಗಿ ತಿಳಿಯಬೇಕಾದರೆ ಹರಿಹರ, ರಾಘವಾಂಕ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಮುಂತಾದ ದಿಗ್ಗಜರ ಸಾಹಿತ್ಯ ಕೃತಿಗಳನ್ನು ಓದಿದರೆ ಮಾತ್ರ ಕನ್ನಡದ ಸಾಹಿತ್ಯ ಅರ್ಥವಾಗುತ್ತದೆ. ಬೇರೆ ಭಾಷೆಗಳಿಗೆ ಮಾರು ಹೋಗಿ ಕನ್ನಡವನ್ನು ಕಡೆಗಣಿಸುವುದು ಮಾತೃಭಾಷೆಗೆ ದ್ರೋಹ ಬಗೆಯುವುದು ಸರಿಯಲ್ಲ ಎಂದರು. ನಂತರ ಭಾಷೆಯಲ್ಲಿ ಬರುವ ಹಲವು ಮಜಲುಗಳನ್ನು ಹಾಸ್ಯದ ಮೂಲಕ ನಿರೂಪಿಸಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.