ಜಮಖಂಡಿ ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತ ಆರೀಫ್ ಪೆಂಡಾರಿ ಅವರನ್ನು ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿದರು. ಡಾ. ಎಚ್.ಜಿ. ದಡ್ಡಿ, ಸಂಸ್ಥೆ ಸದಸ್ಯ ಕಾಡು ಮಾಳಿ, ಸುನಂದಾ ಶಿರೂರ, ರಾಘವೇಂದ್ರ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಪತ್ರಕರ್ತರು ನಿರ್ಭಯವಾಗಿ ಸುದ್ದಿ ಬರೆಯಲಿ

ಗಿರೀಶ ಸಗರ

ಜಮಖಂಡಿ : ಪತ್ರಕರ್ತರು ನಿರ್ಭಿಡೆ, ನಿಷ್ಠುರ ಮತ್ತು ಶೋಧನೆಯಂತಹ ಚುರುಕು ಬುದ್ಧಿ ಹೊಂದಿರಬೇಕು. ವೃತ್ತಿಯಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುವ ಎದೆಗಾರಿಕೆವುಳ್ಳವರಾಗಬೇಕೆಂದು ಹೃದಯರೋಗ ತಜ್ಞ ಡಾ. ಎಚ್.ಜಿ. ದಡ್ಡಿ ಹೇಳಿದರು.

ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲ ಅಂಗಗಳ ಜತೆಗೆ ಪತ್ರಿಕಾರಂಗವೂ ಮಹತ್ವ ಹೊಂದಿದೆ. ಇವುಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯ.

ನಮ್ಮಲ್ಲಿ ಕೌಟುಂಬಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಹದಗೆಟ್ಟಿವೆ. ಇವುಗಳಲ್ಲಿನ ಕೊರತೆ ಗುರುತಿಸಿ ನಿರ್ಭಯವಾಗಿ, ಯಾವುದೇ ಮುಲಾಜಿಗೆ ಮಣಿಯದೆ ಸುದ್ದಿ ಮಾಡುವವನೇ ನಿಜವಾದ ಪತ್ರಕರ್ತ ಎನಿಸಿಕೊಳ್ಳಬಲ್ಲ.

ಪತ್ರಿಕಾ ವೃತ್ತಿ ಸಮಾಜದಲ್ಲಿ ಜವಾಬ್ದಾರಿಯುತ ಕೆಲಸವಾಗಿದೆ ಎಂದರು. ಇಂದು ಪಾಲಕರು ತಮ್ಮ ಮಕ್ಕಳಿಗೆ ನೈತಿಕ, ಮಾನವೀಯ, ಸಾಮಾಜಿಕ ಮೌಲ್ಯಗಳ ಬಗ್ಗೆ ತಿಳಿಹೇಳಬೇಕಿದೆ.

ಕಿರಿಯರಿಗೆ ಬುದ್ಧಿವಾದ ಹೇಳುವ ಕೆಲಸ ಮಾಡಬೇಕಾಗಿದೆ. ರಾಜಕೀಯ ಮುಖಂಡರು ಇಂದು ಎಲ್ಲ ರಂಗಗಳಲ್ಲೂ ತಮ್ಮ ಹಸ್ತಕ್ಷೇಪ ಮಾಡುವುದರಿಂದ ಕೆಲವು ಅನಾಹುತಗಳು ನಡೆಯುತ್ತಿವೆ. ಇಂದಿನ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕು ಎಂದರು.

ಪತ್ರಕರ್ತ ಆರೀಫ್ ಪೆಂಡಾರಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಸ್ಥೆ ಸದಸ್ಯ ಕಾಡು ಮಾಳಿ, ಸುನಂದಾ ಶಿರೂರ, ರಾಘವೇಂದ್ರ ಕುಲಕರ್ಣಿ, ಡಾ. ರಂಗನಾಥ ಸೋನ್ವಾಲಕರ ಇತರರಿದ್ದರು.

ಲಯನ್ಸ್ ಅಧ್ಯಕ್ಷ ಸಂಗಮೇಶ ಕೌಜಲಗಿ ಸ್ವಾಗತಿಸಿದರು. ರಾಜಶೇಖರ ಹೊಸಟ್ಟಿ ನಿರೂಪಿಸಿದರು. ನರೇಂದ್ರ ಮಾನೆ ವಂದಿಸಿದರು.