ದಾಂಡೇಲಿಯಲ್ಲಿ ತಾಲೂಕು ಪ್ರೆಸ್ ಕ್ಲಬ್ ವತಿಯಿಂದಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಹಿರಿಯ ಪರ್ತ್ರಕರ್ತೆ ಕೃಷ್ಣಿ ಶಿರೂರ ಉದ್ಘಾಟಿಸಿದರು. ಅನಿಲ ನಾಯ್ಕರ, ಕೃಷ್ಣಾ ಪಾಟೀಲ, ಅಶೋಕ ಶಿಗ್ಗಾಂವಿ, ರಾಜಾರಾಮ ಪವಾರ, ಬಿ.ಎಸ್. ಲೋಕಾಪುರ, ಬಿ.ಎನ್. ವಾಸರೆ, ಗುರುಶಾಂತ ಜಡೆಹಿರೇಮಠ, ಯು.ಎಸ್. ಪಾಟೀಲ ಇದ್ದರು.  
ಜಿಲ್ಲೆ

ಪತ್ರಕರ್ತರು ಆತ್ಮ ತೃಪ್ತಿಗಾಗಿ ವರದಿ ಮಾಡಲಿ

ವಿನಯ ಹೆಗಡೆ

ದಾಂಡೇಲಿ: ಪತ್ರಕರ್ತರು ಪ್ರತ್ಯಕ್ಷ್ಯ ಕಂಡರೂ ಪ್ರಮಾಣಿಸಿ ನೋಡಬೇಕು. ಯಾವುದೇ ಆಮೀಷಕ್ಕೆ ಒಳಗಾಗದೇ ಆತ್ಮ ತೃಪ್ತಿಗಾಗಿ ವರದಿ ಮಾಡಬೇಕು ಎಂದು ಹುಬ್ಬಳ್ಳಿ ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರ ಹೇಳಿದರು.

ನಗರದಲ್ಲಿ ದಾಂಡೇಲಿ ತಾಲೂಕು ಪ್ರೆಸ್ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಸರಳ ಸಜ್ಜನಿಕೆಯ ಸೇವೆಗಾಗಿ ದಾಂಡೇಲಿ ಪ್ರೆಸ್ ಕ್ಲಬ್ ಗುರುತಿಸಿದ ನಜೀರಸಾಬ್ ಕಮಾಲಸಾಬ್ ವಡಗಾವಿ, ಹಾಲು ಮಾರಾಟ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಬೊಮ್ಮನಳ್ಳಿಯ ಗೌಳಿ ನಾಗಿಬಾಯಿ ಲಕ್ಕು ಪಟಗಾರೆ, ಹಿರಿಯ ಪತ್ರಕರ್ತ ಗುರುಶಾಂತ ಜಡೆಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ನಾಯ್ಕರ, ಪೌರಾಯುಕ್ತ ರಾಜಾರಾಮ ಪವಾರ, ಸಿಪಿಐ ಬಿ.ಎಸ್. ಲೋಕಾಪುರ ವೇದಿಕೆಯಲ್ಲಿ ಇದ್ದರು. ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಕೃಷ್ಣಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತೆ ಕೃಷ್ಣಿ ಶಿರೂರ ಅವರನ್ನು ದಾಂಡೇಲಿ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಮಾನಸಾ ವಾಸರೆ ಪಾರ್ಥಿಸಿದರು, ಪ್ರತಕರ್ತ ಬಿ.ಎನ್. ವಾಸರೆ, ಯು.ಎಸ್. ಪಾಟೀಲ ಹಾಗೂ ಸಂದೇಶ ಜೈನ್ ನಿರ್ವಹಿಸಿದರು. ಪತ್ರಕರ್ತ ಪ್ರವೀಣಕುಮಾರ ಸುಲಾಖೆ, ಡಾ. ಮಹೇಂದ್ರಕುಮಾರ, ಅಕ್ಷಯ ಗೋಸಾವಿ, ರಾಜೇಶ ತಲೇಕರ, ಅಫತಾಬ್ ಶೇಖ್, ಲತೇಶ ಚಾಟಲಾ, ಸರ್ಫರಾಜ ಶೇಖ್ ಸಹಕರಿಸಿದರು.