ಜಿಲ್ಲೆ

ಕೃಷಿಕರ ಪರವಾಗಿ ಕಾರ್ಯನಿರ್ವಹಿಸಲಿ

ಕಡೂರು: ಕೃಷಿಕ ಸಮಾಜದ ನೂತನ ನಿರ್ದೇಶಕರ ತಂಡ ಹಿರಿಯರ ಸೇವೆ ಪರಿಗಣಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುವಂತಾಗಲಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದಲ್ಲಿ ಹಿರಿಯ ರಾಜಕೀಯ ಮುಖಂಡ ಎನ್.ಕೆ. ಇಮಾಮ್‌ಸಾಬ್ ನಿವಾಸದಲ್ಲಿ ತಾಲೂಕು ಕೃಷಿಕ ಸಮಾಜದ ನೂತನ ಆಡಳಿತ ಮಂಡಳಿಯ ಅಭಿನಂದನೆ ಸ್ವೀಕರಿಸಿ ಮಾತನಾಡಿ, ತಾಲೂಕು ಕೃಷಿಕ ಸಮಾಜ ರಾಜಕೀಯ ಹೊರತು ಪಡಿಸಿ ಆಯ್ಕೆಯಾದ ಸದಸ್ಯರನ್ನು ಹೊಂದಿದ್ದು ಇದೊಂದು ರಾಜಕಿಯೇತರ ಸಂಸ್ಥೆಯಾಗಿದೆ ನೂತನ ಮಂಡಳಿ ಕೃಷಿಕರ ಪರವಾಗಿ ದುಡಿಯಲಿ ಎಂದರು.

ಕೃಷಿಕ ಸಮಾಜ ಸಾಮಾನ್ಯರಾದ ರೈತನ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಯೋಜನೆಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ತಲುಪಿಸುವ ಸೇತುವೆಯಾಗಿ ಕೃಷಿಕ ಸಮಾಜ ಕಾರ್ಯನಿರ್ವಹಿಸಲಿದೆ. ಕೃಷಿಕ ಸಮಾಜದ 10 ಲಕ್ಷ ಅನುದಾನ ಬೇಡಿಕೆ ಸಲ್ಲಿಸಿದ್ದು, ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರುದ್ರೇಗೌಡರು, ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಕುಪ್ಪಾಳು ರೇಣುಕಾಆರಾಧ್ಯ, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ವಡೆರಹಳ್ಳಿ ಅಶೋಕ್, ಮಾಚೇನಹಳ್ಳಿ ಅಶೋಕ್, ಜಿಲ್ಲಾ ಪ್ರತಿನಿಧಿ ರಂಗನಾಥ್, ಗಂಗಮ್ಮ, ಮಲ್ಲೇಶ್, ಲಿಂಗದೇವರು, ಚಂದ್ರಪ್ಪ ಎಂ.ಹೆಚ್.ಮತ್ತು ಇಮಾಮ್ ಸಾಬ್, ಶಶಿಧರ್, ಕಂಸಾಗರ ಸೋಮಶೇಖರ್, ದೊಣ್ಣೆಕೋರನಹಳ್ಳಿ ಉಮೇಶ್, ಇಮ್ರಾನ್ ಖಾನ್, ಚೆಕ್‌ಪೋಸ್ಟ್ ರವಿ ಮತ್ತಿತರಿದ್ದರು.