ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ್ಯೋತ್ಸವ ನಿಮಿತ್ತ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆ ಮತ್ತು ಜಿಲ್ಲೆಯ ಮಹನೀಯರ ನೆನಪಿಸಿಕೊಳ್ಳುವ ಕಾರ್ಯಕ್ರಮವು ಎಲ್ಇಎ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿತು.
ಎಸ್.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಭರಮಪ್ಪ ಭಾವಿ ಉಪನ್ಯಾಸ ನೀಡಿ, ರಾಷ್ಟ್ರ ಮಟ್ಟದ ಹೋರಾಟಗಾರರ ಜತೆಗೆ ಸ್ಥಳಿಯ ಹೋರಾಟಗಾರರನ್ನು ಗುರುತಿಸಿ, ಎಲೆ ಮರೆಯ ಕಾಯಿಯಂತಿರುವ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿ, ಗೌರವಿಸುವ ಕಾರ್ಯವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಿ.ಬಿ. ಮಟ್ಟಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಲೋಹಿತ ಕಾರೇಕರ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದ ಪ್ರಭು ಕುಂದರಗಿ ಕಲಾತಂಡದ ಬಸವರಾಜ ಗುಡ್ಡಪ್ಪನವರ, ಪ್ರಶಾಂತ ತಡಸ ಅವರು ದೇಶಭಕ್ತಿ ಹಾಗೂ ಸ್ವತಂತ್ರ ಹೋರಾಟಗಾರರ ಕುರಿತು ಲಾವಣಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕವಿತಾ ಮಟ್ಟಿ ಸ್ವಾಗತಿಸಿದರು. ಚೆನ್ನಮ್ಮ ಪಾಟೀಲ ನಿರೂಪಿಸಿದರು.