ಜಿಲ್ಲೆ

ಅನ್ನದಾತನ ಬೆನ್ನೆಲುಬಾಗಿ ಸರ್ಕಾರಗಳು ನಿಲ್ಲಲಿ

ಲಕ್ಷೆ್ಮೕಶ್ವರ: ರೈತ ದೇಶದ ಬೆನ್ನೆಲುಬು ಎಂದು ಹೇಳಿದರೆ ಸಾಲದು. ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತನ ಬೆನ್ನೆಲುಬಾಗಿ ಸರ್ಕಾರಗಳು ನಿಲ್ಲಬೇಕು ಎಂದು ಶಿರಹಟ್ಟಿ, ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ನುಡಿದರು.

ಪಟ್ಟಣದಲ್ಲಿ ರೇಣುಕಾ ಟ್ರ್ಯಾಕ್ಟರ್ಸ್ ವತಿಯಿಂದ ಆಯೋಜಿಸಿದ್ದ ರೈತರ ಹಬ್ಬ ಮತ್ತು ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೃಷಿಯೂ ಒಂದು ವಿಜ್ಞಾನ, ಸಂಶೋಧನೆಯಾಗಿದೆ. ಸರ್ಕಾರದ ಯೋಜನೆಗಳ ಸರಿಯಾಗಿ ಬಳಸಿಕೊಂಡು ಕೃಷಿಯಲ್ಲಿ ಸ್ವಾವಲಂಬನೆ ಹೊಂದಬೇಕು ಎಂದರು.

ಕುಂದಗೋಳದ ಶ್ರೀ ಬಸವಣ್ಣಜ್ಜ, ಸಂಕದಾಳದ ಶ್ರೀ ಹಾಲಶಿವಯೋಗಿಗಳು ಮಾತನಾಡಿ, ನಾಡಿನಲ್ಲಿ ಧರ್ಮ, ನೀತಿ, ನ್ಯಾಯ, ಪರೋಪಕಾರದಂತಹ ಗುಣಗಳು ಉಳಿದಿರುವುದು ಕೃಷಿಕರಲ್ಲಿ ಮಾತ್ರ ಎಂದರು.

ಸ್ವರಾಜ್ ಕಂಪನಿಯ ಸ್ಟೇಟ್ ಹೆಡ್ ರಿಷಿರಾಜ ಮತ್ತು ಸ್ವರಾಜ್ ಟ್ರ್ಯಾಕ್ಟರ್ಸ್​ನ ಮಾಲೀಕ ವೈ.ಎನ್. ಪಲ್ಲೇದ ಮಾತನಾಡಿ, ಸ್ವರಾಜ್ ಟ್ರಾ್ಯಕ್ಟರ್ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದೊಂದಿಗೆ ರೈತರು ಸೇರಿ ಎಲ್ಲ ಗ್ರಾಹಕರ ಅಚ್ಚುಮೆಚ್ಚಿನ ಟ್ರ್ಯಾಕ್ಟರ್ ಆಗಿ ದೇಶದ ಜನರ ಮನಗೆದ್ದಿದೆ. ರೈತರು ತಮ್ಮ ಜಮೀನುಗಳಲ್ಲಿ ಎಲ್ಲ ಬಗೆಯ ಮತ್ತು ಅತ್ಯಂತ ಕಠಿಣ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಶಕ್ತಿಯುತ ಮತ್ತು ರೈತಸ್ನೇಹಿ ಟ್ರ್ಯಾಕ್ಟರ್ ಸ್ವರಾಜ್ ಆಗಿದೆ. ಹೊಸ ತಂತ್ರಜ್ಞಾನ, ನವೀನತೆ, ಶಕ್ತಿಯುತ, ವಿಶ್ವಾಸಾರ್ಹತೆ ಮತ್ತು ಉತ್ತಮ ಸೇವೆಯಿಂದ ರೈತರ ಮನಗೆಲ್ಲುವ ಮೂಲಕ ಮಾರಾಟ ಸಂಖ್ಯೆ ಹೆಚ್ಚಿಸಲಾಗಿದೆ. ರೈತರ ಸಹಕಾರವೇ ಎಲ್ಲದಕ್ಕೂ ಮುಖ್ಯವಾಗಿದೆ ಎಂದರು.

ಶಾಸಕರಾದ ಎಂ.ಆರ್. ಪಾಟೀಲ, ಡಾ. ಚಂದ್ರು ಲಮಾಣಿ ಮಾತನಾಡಿದರು. ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಸಂಗಯ್ಯ ಪೂಜಾರ, ಚನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ, ಮಲ್ಲಿಕಾರ್ಜುನ ಬಾಳಿಕಾಯಿ, ಜೆ.ಸಿ. ಪಾಟೀಲ, ವಿರೂಪಾಕ್ಷ ಆದಿ, ಕಂಪನಿಯ ಅಧಿಕಾರಿಗಳಾದ ವಿಲಾಸ ಸಾಗರ, ಮುಖೇಶ ಬಲ್ಲೆ, ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಬುರ್ಲಿ, ನೀಲಪ್ಪ ಬಿ., ಬಸವರಾಜ ಅರಳಿ, ಶಿವಯೋಗಿ ಹೊಸಕೇರಿ, ಬಿ.ಎಂ. ನಾವಳ್ಳಿ, ಪ್ರಭುಗೌಡ ಸಂಕನಗೌಡ, ಸಿದ್ದಣ್ಣ ಹುಣಸಣ್ಣವರ, ಶಂಕ್ರಪ್ಪ ಆದಿ, ಬಿ.ಡಿ. ಪಲ್ಲೇದ ಸೇರಿ ರೇಣುಕಾ ಟ್ರ್ಯಾಕ್ಟರ್ ಶೋರೂಮ್ ಸಿಬ್ಬಂದಿ ಇದ್ದರು. ವೈ.ಎಸ್. ಕೂಬಿಹಾಳ, ಹುತ್ತನಗೌಡ ತೆಂಬದಮನಿ ಅವರನ್ನು ಸನ್ಮಾನಿಸಲಾಯಿತು. ಟ್ರ್ಯಾಕ್ಟರ್ ಖರೀದಿಸಿ ಬಹುಮಾನ ಪಡೆದ ಇಬ್ಬರು ರೈತರಿಗೆ ಬೈಕ್ ಮತ್ತು 25ಕ್ಕೂ ಹೆಚ್ಚು ರೈತರು ಪ್ರಿಜ್, ಟಿವಿ ಇನ್ನಿತರ ಬಹುಮಾನಗಳನ್ನು ಪಡೆದರು. ಸ್ನೇಹಾ ಮಾಲಿಪಾಟೀಲ, ಎಸ್.ಎಫ್. ಆದಿ ನಿರ್ವಹಿಸಿದರು.