??????? 
ಜಿಲ್ಲೆ

ಸರ್ಕಾರಗಳು ರೈತರಿಗೆ ಸ್ಪಂದಿಸಲಿ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಗೆ ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ ನೇತತ್ವದಲ್ಲಿ ರೈತರು ಬುಧವಾರ ನಯಾನಗರ ಸಮೀಪ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮಲಪ್ರಭಾ ನದಿಗೆ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗಾಗಿ ಕೇಂದ್ರ, ರಾಜ್ಯ ಸರ್ಕಾರ ಶ್ರಮಿಸಬೇಕು. ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳಿಗೆ ಸರ್ಕಾರ ಬೆನ್ನೆಲುಬಾಗಿ ನಿಂತು ಕೆಲಸ ಮಾಡಬೇಕು. ಪ್ರಥಮ ಬಾರಿಗೆ ನೇಗಿಲಯೋಗಿ ರೈತ ಸೇವಾ ಸಂಘದಿಂದ ಮಲಪ್ರಭಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು. ಸಂಘದ ತಾಲೂಕಾಧ್ಯಕ್ಷ ಸೋಮಲಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಮಲಪ್ರಭಾ ನದಿ ತಾಯಿ ಸಮಾನ. ಮಲಪ್ರಭಾ ನದಿ ಸಮೃದ್ಧವಾಗಿ ಹರಿಯಲಿ. ಈ ಭಾಗದ ಜನರ ಬದುಕು ಹಸನಾಗಲಿ ಎಂದರು.

ವೇ.ಮೂ ಮಹಾಂತಯ್ಯಶಾಸ್ತ್ರಿ ತೆಗ್ಗಿನಮಠ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಸಂಘದ ಸದಸ್ಯರಾದ ಮಹಾಂತೇಶ ಬೋಳನ್ನವರ, ಅನಿಲ ಗಿರನವರ, ಶಂಕರಗೌಡ ಪಾಟೀಲ, ಮುದಕಪ್ಪ ತೋಟಗಿ, ಮೋಹನ ವಕ್ಕುಂದ, ಮೌಲಿ ನಲವಡೆ, ಬಸವರಾಜ ಜಂಬಗಿ, ರಮೇಶ ಮರಕುಂಬಿ, ಮಡಿವಾಳಪ್ಪ ಚಿಕ್ಕೊಪ್ಪ, ಅದಶ್ಯಪ್ಪ ಹುಚ್ಚನ್ನವರ, ಮಡಿವಾಳಪ್ಪ ಬುಡಶೆಟ್ಟಿ, ರಾಯಪ್ಪ ಮರೆಕ್ಕನವರ, ಬಾಬು ಸಂಗೊಳ್ಳಿ, ಪ್ರವೀಣ ಬೋಳನ್ನವರ, ಮಹೇಶ ಬೋಳನ್ನವರ, ಗೌಡಪ್ಪ ಹೊಸಮನಿ, ಅಕ್ಷಯ ಬೋಳನ್ನವರ ಇತರರಿದ್ದರು.