ಪಾಂಡವಪುರ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ದಿನ ದರ್ಶಿಕೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಿಡುಗಡೆ ಮಾಡಿದರು. ಎಸ್.ಸಂತೋಷ್, ಲೋಕೇಶ್ ಮೂರ್ತಿ, ರವಿಕುಮಾರ್ ಇತರರು ಇದ್ದರು. 
ಜಿಲ್ಲೆ

ಸರ್ಕಾರಿ ನೌಕರರು ಒಗ್ಗಟ್ಟಾಗಿ ಜವಾಬ್ದಾರಿ ನಿಭಾಯಿಸಲಿ

ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ

ಪಾಂಡವಪುರ : ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಸರ್ಕಾರಿ ನೌಕರರ ಸೇವೆ ಮಹತ್ವದಾಗಿದ್ದು, ಸರ್ಕಾರಿ ನೌಕರರು ಒಗ್ಗಟ್ಟಾಗಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಿನದರ್ಶಿಕೆ ಸೋಮವಾರ ಬಿಡುಗಡೆ ಮಾಡಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘ ಮತ್ತು ಶಾಲಾ ಶಿಕ್ಷಕರ ಸಂಘಗಳ ಪಧಾಧಿಕಾರಿಗಳಿಗೆ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆ ನಡೆಯುತ್ತದೆ. ಚುನಾವಣೆ ನಂತರ ಯಾರೇ ಗೆದ್ದರೂ, ಸೋತರೂ ಎಲ್ಲವನ್ನು ಮರೆತು ಅಧಿಕಾರಿಗಳು ಮತ್ತು ಒಗ್ಗೂಡಿ ಕೆಲಸ ಮಾಡಿಕೊಂಡು ಹೋಗಬೇಕು. ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸಿದರೆ ಮಾತ್ರ ಜನರನ್ನು ಮೇಲೆತ್ತಲು ಸಾಧ್ಯವಾಗುತ್ತದೆ ಎಂದರು.

ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಾವು ನಿಷ್ಠೆಯಿಂದ ನಮ್ಮ ಕೆಲಸ ಮಾಡೋಣ. ಸರ್ಕಾರಿ ನೌಕರರ ಸಂಘದ ಕಚೇರಿ ಮತ್ತು ಶಿಕ್ಷಕರ ಭವನದ ಅಭಿವೃದ್ಧಿ ಸಹಕಾರ ನೀಡಲಾಗುವುದು. ನೂತನ ವರ್ಷ ಎಲ್ಲರಿಗೂ ಶುಭವನ್ನುಂಟು ಮಾಡಲಿ ಹಾರೈಸಿದರು.

ತಹಸೀಲ್ದಾರ್ ಎಸ್.ಸಂತೋಷ್. ತಾಪಂ ಇಒ ಲೋಕೇಶ್ ಮೂರ್ತಿ, ಬಿಇಒ ರವಿಕುಮಾರ್, ಕಂದಾಯ ಶಿರಸ್ತೇದಾರ್ ಮೋಹನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎ.ಕೆಂಪೇಗೌಡ, ಕಾರ್ಯದರ್ಶಿ ಎಂ.ಡಿ.ಕುಮಾರ್, ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್, ಮಾಜಿ ಅಧ್ಯಕ್ಷ ಪರಮಮೇಶ್, ಮಾಜಿ ಕಾರ್ಯದರ್ಶಿ ಕೆ.ಸಿ.ಕುಮಾರಸ್ವಾಮಿ, ಖಜಾಂಚಿ ಜಯರಾಮು, ಗೌರವಾಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ರಮ್ಯ, ಪೂರ್ಣಿಮಾ, ಗಿರೀಶ್, ಲೋಕೇಶ್, ರಾಥೋಡ್, ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಂಜುನಾಥ್, ಕೆ.ಮಂಜುಳಾ, ಸುಮಂಗಳಾ, ಜಯಪಾಲ್, ಕೆ.ಪಿ.ರವಿಕುಮಾರ್, ಶಿವಣ್ಣ ಇತರರು ಇದ್ದರು.