ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ದಿವ್ಯಾ ಅವರನ್ನು ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಸಂಸದ ಸುನೀಲ್ ಬೋಸ್ ಸನ್ಮಾನಿಸಿದರು.  
ಜಿಲ್ಲೆ

ಹೆಣ್ಣು ಮಕ್ಕಳು ವಿದ್ಯಾವಂತರಾಗಲಿ

ಮಾದೇಶ್ ತಿ.ನರಸೀಪುರ

ನಂಜನಗೂಡು: ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಇಡೀ ಕುಟುಂಬ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 585 ಅಂಕ ಪಡೆದ ಮೂಡಳ್ಳಿ ಗ್ರಾಮದ ಮಹದೇವಯ್ಯ ಪುತ್ರಿ, ಎಸ್.ಹೊಸಕೋಟೆ ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ದಿವ್ಯಾ ಅವರನ್ನು ತಾಲೂಕು ಹದಿನಾರು ಗ್ರಾಮದಲ್ಲಿ ಭಾನುವಾರ ಸನ್ಮಾನಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಮಕ್ಕಳನ್ನು ವಿದ್ಯಾಭ್ಯಾಸ ಕಡೆಗೆ ಗಮನಹರಿಸಿ ವಿದ್ಯಾವಂತರಾಗಲು ಪಾಲಕರಿಗೆ ಸಲಹೆ ನೀಡಿದರು. ಹದಿನಾರು ಗ್ರಾಮದ ಹಿರಿಯರಾದ ನಿಂಗಯ್ಯ, ನಂಜಪ್ಪ, ಮುಖಂಡ ಇಂಧನ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ನವೀನ್, ಶಿವಕುಮಾರ್, ಕೆ.ಬಿ.ಸ್ವಾಮಿ, ಮಹೇಶ್, ಸೋಮಸುಂದರ್, ಹೆಜ್ಜಿಗೆ ಪುಟ್ಟಣ್ಣ, ಗಿರೀಶ್,ಕೃಷ್ಣ ಇತರರು ಇದ್ದರು.