ಚಿಕ್ಕಮಗಳೂರು: ಸತ್ಯ, ಶಾಂತಿ, ಅಹಿಂಸೆಯ ಸಂದೇಶ ಸಾರುವ ಗಾಂಧೀಜಿಯವರ ವಿಚಾರಧಾರೆಗಳು ವಿಶ್ವಾದ್ಯಾಂತ ಪಸರಿಸಲಿ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕÈತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ನೆನಪಿನಂಗಳಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅಹಿಂಸೆ ಮತ್ತು ಸತ್ಯವನ್ನು ಬಳಸಿಕೊಂಡು ಹೋರಾಟದ ಬಗೆಗಿನ ಅವರ ವಿಶಿಷ್ಟ ವಿಧಾನವು ಸ್ವಾತಂತ್ರö್ಯ ಚಳುವಳಿಯ ಇತಿಹಾಸದ ಹಾದಿಯನ್ನು ಬದಲಾಯಿಸಿತು. ಶಾಂತಿಯುತ ಮಾರ್ಗಗಳ ಮೂಲಕ ಸ್ವಾತಂತ್ರÈವನ್ನು ಸಾಧಿಸುವ ಅವರ ನಂಬಿಕೆಯು ಗಾಂಧೀಜಿಯನ್ನು ಪ್ರತ್ಯೇಕಿಸಿತು. ಗಾಂಧೀಜಿಯವರ ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪ್ರತಿರೋಧಕ ಪರಿಕಲ್ಪನೆಯು ಹಿಂಸಾಚಾರವನ್ನು ಆಶ್ರಹಿಸದೆ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗಿಯಾಗಲು ಲಕ್ಷಾಂತರ ಜನರನ್ನು ಪ್ರೇರೆಪಿಸಿತು ಎಂದರು.
ಸ್ವಚ್ಛ ಭಾರತದ ಕನಸನ್ನು ಮೊದಲಿಗೆ ಕಂಡವರು ಮಹಾತ್ಮ ಗಾಂಧೀಜಿ. ಸ್ವಾತಂತ್ರö್ಯಕ್ಕಿAತ ನೈರ್ಮಲ್ಯವು ಮುಖ್ಯ ಎಂಬ ಗಾಂಧೀಜಿಯವರ ಪರಿಕಲ್ಪನೆಯು ಅವರು ಸ್ವಚ್ಛತೆಗೆ ನೀಡುತಿದ್ದ ಆದ್ಯತೆಯನ್ನು ತಿಳಿಸುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗಾಂಧೀಜಿ ಪರಿಕಲ್ಪನೆ ಇಂದು ನನಸಾಗ ಬೇಕಾಗಿದೆ ಎಂದು ತಿಳಿಸಿದರು.
ಭಾರತದ ಎರಡನೇ ಪ್ರಧಾನಿಯಾದ ಲಾಲ್ ಬಹುದ್ದೂರ್ ಶಾಸ್ತಿçಯ ಅವರು ಸರಳತೆಯ ಜೀವನಕ್ಕೆ ಉದಾಹರಣೆಯಾಗಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಅವರ ಘೋಷಾ ವಾಕ್ಯವು ದೇಶದ ಜನತೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಅವರ ದೇಶ ಪ್ರೇಮವು ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು. ಜೊತೆಗೆ ಗಾಂಧೀಜಿ ಅವರ ವಿಚಾರಧಾರೆಗಳನ್ನು ತಮ್ಮಲ್ಲಿ ಆಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ, ಗಾಂಧೀಜಿ ದೇಶದ ಜನತೆಗೆ ಸಾಮರಸ್ಯದ ಬದುಕಿನ ಮಹತ್ವವನ್ನು ಸಾರಿದರು. ಸರ್ವ ಧರ್ಮವನ್ನು ಗೌರವಿಸುವ ಅವರ ಮನೋಭಾವ ಪ್ರತಿಯೊಬ್ಬ ಭಾರತೀಯರಲ್ಲೂ ಮೂಡಬೇಕು. ಲಾಲ್ ಬಹದ್ದೂರ್ ಶಾಸ್ತಿçಯವರ ಜೈ ಜವಾನ್ ಜೈ ಕಿಸಾನ್ ಎಂಬ ವಾಕ್ಯವು ಕೃಷಿ ಪ್ರಧಾನ ದೇಶವಾದ ಭಾರತದ ಪ್ರತಿಯೊಬ್ಬ ರೈತರ ಗೌರವವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಯುವ ಜನರಲ್ಲಿ ಕೃಷಿ ಚಟುವಟಿಕೆಗಳ ಮಹತ್ವವನ್ನು ಹಾಗೂ ಕೃಷಿಯಲ್ಲಿ ಲಾಭದಾಯಕವಾದ ಜೀವನವನ್ನು ನಿರ್ಮಿಸಬಹುದು ಎಂಬ ವಿಚಾರವನ್ನು ತಿಳಿಸಿ ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಯಾವುದೇ ಶಸ್ತç ಬಳಸದೆ ಕೇವಲ ಅಹಿಂಸಾ ಹಾಗೂ ಶಾಂತಿ ಮಾರ್ಗದಿಂದ ದೇಶವು ಸ್ವಾತಂತ್ರಗಳಿಸಲು ಕಾರಣೀಕೃತರಾದ ಗಾಂಧೀಜಿಯವರ ಬದುಕು ಪ್ರೇರಣಿಯವಾದುದು. ದೇಶದ ಸೈನಿಕರ ಹಾಗೂ ರೈತರನ್ನು ಗೌರವಿಸಿ ಬೆಂಬಲಿಸಿ ಅವರನ್ನು ದೇಶದ ಶಕ್ತಿ ಎಂದು ಹೇಳುವ ಲಾಲ್ ಬಹುದ್ದೂರ್ ಶಾಸ್ತಿçಯವರ ಸರಳ ಸಜ್ಜನಿಕೆಯ ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸುರೇಂದ್ರ ನಾಯಕ್ ಮತ್ತು ತಂಡದವರು ಗಾಂಧೀಜಿಯವರ ಪ್ರಿಯವಾದ ವಿವಿಧ ಭಜನೆಗಳನ್ನು ಹಾಗೂ ಭಕ್ತಿಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಔರಂಗ್ ಪಾಷಾ ಕುರಾನ್ ಹಾಗೂ ಫಾದರ್ ಬಿಷಪ್ ಥಾಮಸ್ ಅಂತೋಣಿ ಬೈಬಲ್ ಸರ್ವಧರ್ಮಗಳ ಧಾರ್ಮಿಕ ಪಠಣ ಮಾಡಿದರು.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮಗಾಂಧೀಜಿ ೧೫೫ನೇ ಜಯಂತಿ ಅಂಗವಾಗಿ ಪದವಿ, ಸ್ನಾತಕೋತ್ತರ, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷ ಡಾ. ಅಂಶುಮAತ್, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಎಚ್.ಹರೀಶ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಶಿವಾನಂದ ಸ್ವಾಮಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತಹಸೀಲ್ದಾರ್ ಡಾ. ಸುಮಂತ್, ನಗರಸಭೆ ಪೌರಾಯುಕ್ತ ಬಸವರಾಜ್ ಮತ್ತಿತರರಿದ್ದರು.